ಕೋಡಿಕಲ್ :ವಿಶ್ವ ಭಾರತಿ ಫ್ರೆಂಡ್ ಸರ್ಕಲ್ 37ನೇ ವಾರ್ಷಿಕೋತ್ಸವ ಸಮಾರಂಭ.

Coastal Bulletin
ಕೋಡಿಕಲ್ :ವಿಶ್ವ ಭಾರತಿ ಫ್ರೆಂಡ್ ಸರ್ಕಲ್ 37ನೇ ವಾರ್ಷಿಕೋತ್ಸವ ಸಮಾರಂಭ.

ಕೋಡಿಕಲ್,: ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಇದರ 37ನೇ ವಾರ್ಷಿಕೋತ್ಸವವು ಕೋಡಿಕಲ್ ಆಲಗುಡ್ಡೆಯ ಎಜೆ ಶೆಟ್ಟಿ ಗ್ರೌಂಡ್ ನಲ್ಲಿ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ ರಾಮಕೃಷ್ಣ ಜೋಕಟ್ಟೆ ಇವರ ಉಪಸ್ಥಿತಿಯಲ್ಲಿ ಜರಗಿತು.

ಗ್ರಾಮದ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಕ್ರಿಯವಾಗಬೇಕೆಂದು ಪದವು ಕಾಲೇಜಿನ ಉಪನ್ಯಾಸಕಿ ವಿಜಯಲಕ್ಷ್ಮಿ ಪುರುಷೋತ್ತಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಶ್ರೀ ಗೋಕರ್ನಾಥೇಶ್ವರ ಎಜುಕೇಶನ್ ನಿವೃತ್ತ ಡೀನ್ ಉಮ್ಮಪ್ಪ ಪೂಜಾರಿ ದೀಪ ಪ್ರಜ್ವಲಿಸಿ, ಈ ಪರಿಸರದಲ್ಲಿ ಯುವ ಸಮುದಾಯ ಸನ್ನಡತೆಯಲ್ಲಿ ನಡೆಯಲು ಸಂಸ್ಥೆ ಪೂರಕವಾಗಿದೆ ಎಂದರು.

 ವೀರನಾರಾಯಣ ದೇವಸ್ಥಾನದ ಮಾಜಿ ಮುಕ್ತೇಶ್ವರರಾದ ಪುರುಷೋತ್ತಮ್ ಕಾಲ್ಬಾವಿ ಕೋಡಿಕಲ್ ಸಾಧಕರನ್ನು ಸನ್ಮಾನಿಸಿ ಪ್ರತಿಯೊಬ್ಬರು ಸಾಮಾಜಿಕ ಸೇವೆಯಲ್ಲಿ ತಮ್ಮ ಬದುಕನ್ನು ತೊಡಗಿಸಿಕೊಳ್ಳಬೇಕು ಮತ್ತು ಗ್ರಾಮದ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಕ್ರಿಯವಾಗಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ಮಹಾಪೌರರಾದ ಮನೋಜ್ ಕುಮಾರ್ ಕೋಡಿಕಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಜಿಲ್ಲಾ ಯೂತ್ ಕಾಂಗ್ರೆಸ್ಸಿನ ಕಾರ್ಯಧ್ಯಕ್ಷರು ಶ್ರೀ ಗಿರೀಶ್ ಆಳ್ವ, ಎಜೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶಾಂತರಾಮ್ ರೈ ಉಪಸ್ಥಿತರಿದ್ದರು .

ಸಂದರ್ಭದಲ್ಲಿ ಮಾಜಿ ನಿವೃತ್ತ ಸೇನಾನಿಗಳಾದ ವೆಂಕಟೇಶ ಕುಂಪಲ, ಅನಿಲ್ ಕುಮಾರ್ , ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಇವರನ್ನು ಸನ್ಮಾನಿಸಲಾಯಿತು. 

ಸಮಾಜಸೇವಕರಾದ ಕಾರ್ಪೊರೇಟರ್ ಗಣೇಶ್ ಕುಲಾಲ್ ಹಾಗೂ ಆಶಾ ಕಾರ್ಯಕರ್ತೆಯಾದ ಶಶಿಕಲಾ ಮತ್ತು ಈಜುಪಟುವಾದ ಪೂರ್ವಿ ಎಂ ಕುಲಾಲ್ ಹಾಗೂ ಬೆಲ್ಲಿ ತೆರೆಯ ಬಾಲಕಲಾವಿದೆ ಸ್ನಿಗ್ಧ ಆರ್ ಶೆಟ್ಟಿ ಅಥ್ಲೆಟಿಕ್ ಆ ಪ್ರಸಿದ್ಧ ರಾವ್ ಹಾಗೂ ಸ್ಥಳೀಯ ನಿವಾಸಿ ಉತ್ತಮ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ವಿಜಯ್ ಕುಮಾರ್ ರಂಗ ಕಲಾವಿದರಾದ ಪ್ರಕಾಶ್ ಕೆ ತುಮಿ ನಾಡು ರಾಜೇಶ್ ಮುಗುಲಿ ಇವರನ್ನು ಗೌರವಿಸಲಾಯಿತು. 

ಕಾರ್ಯಕ್ರಮವನ್ನು ರಾಕೇಶ್ ಶೆಟ್ಟಿ ನಿರೂಪಿಸಿದರು ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು ಅಧ್ಯಕ್ಷರಾದ ರಾಮಕೃಷ್ಣ ಜೋಕಟ್ಟೆ ವಂದನೆಗೈದರು ಶಾರದ ಆರ್ಟ್ಸ್ ಕಲಾವಿದ ತಂಡದಿಂದ ಕಥೆ ಎಡ್ಡೆಂದು ಎಂದು ನಾಟಕ ಪ್ರದರ್ಶನಗೊಂಡಿತು

Leave a Comment