Coastal Bulletin

ಬಂಟ್ವಾಳ :ಲಯನ್ಸ್ ಕ್ಲಬ್ ಮಾಣಿ ಇದರ ಅಶ್ರಯದಲ್ಲಿ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯ ಅಯೋಧ್ಯ ನಗರ ಪೆರ್ನೆ ಯಲ್ಲಿ "ಪರಿಣಾಮಕಾರಿ ಅಧ್ಯಯನ ಹಾಗೂ ವೃತ್ತಿ ಮಾರ್ಗದರ್ಶನ"ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರವು ಜ 10ರಂದು ಮಂಗಳವಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ ರೋನಾಲ್ಡ್ ಪಿಂಟೋ ಬಾಗವಹಿಸಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಸುಮಾರು 200 ವಿದ್ಯಾರ್ಥಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜು ಪೆರ್ನೆಯ ಪ್ರಾಂಶುಪಾಲರಾದ

ಶೇಖರ್, ಪ್ರೌಢಶಾಲೆ ಪೆರ್ನೆಯ ಮುಖ್ಯ ಶಿಕ್ಷಕರಾದ ತಾರಾನಾಥ ಶೆಟ್ಟಿ ಲಯನ್ಸ್ ಕ್ಲಬ್ ಮಾಣಿಯ ಅಧ್ಯಕ್ಷರಾದ ಉಮೇಶ್ ಪಿ, ಕೋಶಾಧಿಕಾರಿ ಕೂಸಪ್ಪ ಪೂಜಾರಿ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತತಿದ್ದರು.

Leave a Comment