ತುಂಬೆ :ಗ್ರಾ ಪಂ ನಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ.

Coastal Bulletin
ತುಂಬೆ :ಗ್ರಾ ಪಂ ನಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ.

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಮತ್ತು ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ತುಂಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿ.08ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ನೆರವೇರಿಸಿದರು. ಅಂಚೆ ಇಲಾಖೆಯ ಸೇವೆಗಳಾದ ಆಧಾರ್ ಕಾರ್ಡ್ ಮತ್ತು ಆರೋಗ್ಯ ವಿಮೆ ಜನಸಾಮಾನ್ಯರಿಗೆ ಅಗತ್ಯವಿರುವುದರಿಂದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಯೋಜನವನ್ನು ಪಡೆಯಲು ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

 ಈ ಕಾರ್ಯಕ್ರಮದಲ್ಲಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ, ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್

ಬಿ ತುಂಬೆ, ಅಂಚೆ ಇಲಾಖೆ ಮಾರ್ಕೆಟಿಂಗ್ ಎಕ್ಸಕ್ಯೂಟಿವ್ ಗಣೇಶ್ ಶೆಟ್ಟಿ, ಅಂಚೆ ಇಲಾಖೆಯ ಕಾರ್ಯನಿರ್ವಾಹಕರು ಆದ ಮಹೇಶ್ ನಾಯಕ್, ತುಂಬೆ ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ, ಅಂಚೆ ಇಲಾಖಾ ಸಿಬ್ಬಂದಿಗಳಾದ ಹರೀಶ್, ಶಿವಪ್ರಸಾದ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಅಂಚೆ ಇಲಾಖೆಯ ಸಿಬ್ಬಂದಿ ರೇಖಾ ರವರು ಸ್ವಾಗತಿಸಿ ವಂದನಾರ್ಪಣೆಯನ್ನು ಸಲ್ಲಿಸಿದರು.

Leave a Comment