ಗೋವಿನ ತೋಟ: ರಾಧಾ ಸುರಭಿ ಗೋಮಂದಿರದಲ್ಲಿ ಗೋ ಮಾತೃ ಸಂಗಮ ಕಾರ್ಯಕ್ರಮ.

Coastal Bulletin
ಗೋವಿನ ತೋಟ: ರಾಧಾ ಸುರಭಿ ಗೋಮಂದಿರದಲ್ಲಿ ಗೋ ಮಾತೃ ಸಂಗಮ ಕಾರ್ಯಕ್ರಮ.

ಬಂಟ್ವಾಳ :ಗೋ ಮತ್ತು ಮಾತೆ ಎರಡೂ ಈ ಭೂಮಿ ಮೇಲಿನ ಮಹಾನ್ ಶಕ್ತಿಗಳು ಎಂದು ರಾಧಾ ಸುರಭಿ ಗೋಮಂದಿರದ ಅಧ್ಯಕ್ಷರಾದ ಭಕ್ತಿಭೂಷಣ್ ದಾಸ್ ಪ್ರಭುಜಿಯವರು ಹೇಳಿದರು.

ಅವರು ಸನಾತನ ಧರ್ಮದ ಉಳಿವಿಗಾಗಿ ಭಕ್ತ ಜನರಲ್ಲಿ ಶ್ರೀ ಮದ್ಭಾಗವತ ಮತ್ತು ಗೋವಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಗೋವಿನ ತೋಟದ ಶ್ರೀ ರಾಧಾ ಸುರಭಿ ಗೋಮಂದಿರ ದಲ್ಲಿ ಧರ್ಮ ರಕ್ಷಾರ್ಥ , ರಾಷ್ಟ್ರ ರಕ್ಷಾರ್ಥ, ಗೋ ರಕ್ಷಾರ್ಥ, ಉದ್ದೇಶ ದೊಂದಿಗೆ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗದ ಪೂರ್ವಭಾವಿಯಾಗಿ ಅ.8 ಆದಿತ್ಯವಾರ ನಡೆದ ಗೋ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿ ಮಾತನಾಡಿದರು.

 ಕಾರ್ಯಕ್ರಮವನ್ನು ಕೊಡ್ಮಾಣ್ ವಿವೇಕ್ ಆಳ್ವಾರವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮಹಾ ಯಾಗ ಸಮಿತಿ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ,

ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ , ಪ್ರದಾನ ಕಾರ್ಯದರ್ಶಿ ದಾಮೋಧರ ನೆತ್ತರಕೆರೆ , ಉಪಾಧ್ಯಕ್ಷೆ ಯಾದ ಸುಲೋಚನಾ ಜಿ ಕೆ ಭಟ್ , ಜೊತೆ ಕೋಶಾಧಿಕಾರಿ ವಸಂತಿ ಎಲ್ ಶೆಟ್ಟಿ , ನ್ಯಾಯವಾದಿ ಉಮಾ ಸೋಮಯಾಜಿ , ಸುಭದ್ರಾ ಮಾತಾಜಿ , ಮಹಾಲಕ್ಷ್ಮಿ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ವನಿತಾ ವಿ ಶೆಟ್ಟಿ , ಆರ್ಥಿಕ ಸಮಿತಿ ಸಂಚಾಲಕರಾದ ಡಾ ಅಮಲಾ ಮತ್ತು ಡಾ ಫ್ರೀಡಾ ಉಪಸ್ಥಿತರಿದ್ದರು 

ಮಹಿಳಾ ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರ ಸ್ವಾಗತಿಸಿದರು ,ಮಹಿಳಾ ಸಮಿತಿ ಸಹ ಸಂಚಾಲಕಿ ಕಮಲಾ ರಮೇಶ್ ನಾಣ್ಯ ವಂದಿಸಿದರು.ಸಹ ಸಂಚಾಲಕಿ ರೇಷ್ಮಾವಿನಯ್ ಕಡೆಗೋಳಿ ನಿರೂಪಿಸಿದರು. ಉಮಾ ಚಂದ್ರಶೇಖರ್. ಸುನೀತಾ. ಅಸ್ವಿನಿ. ವೀಣಾ . ವಿದ್ಯಾ. ಗಾಯತ್ರಿ. ಹರ್ಷಿತಾ ಸುಜೀರ್ ಮೇಘನಾ ತುಂಬೆ ಸಹಕರಿಸಿದರು.

Leave a Comment