ಕೈಕoಬ: ಬಂಟ್ವಾಳ ತಾಲೂಕಿನ ಬೆಂಜನಪದವಿನ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಸೆ.೦೯ರಂದು ಶುಕ್ರವಾರ ಸದನಂ ನಾರಾಯಣ ಪೊದುವಾಳ್ ಇವರ ನೇತೃತ್ವದಲ್ಲಿ ಹಾಗೂ ಮಾಣಿಲ ಮಹಾಲಕ್ಷ್ಮಿ ಕ್ಷೇತ್ರದ ಯತಿವರ್ಯರಾದ ಪರಮಪೂಜ್ಯ ಯೋಗಿ ಕೌಸ್ತುಭ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿಯಲ್ಲಿ ಪ್ರಶ್ನಾ ಚಿಂತನೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ರಮೇಶ್ ಬೆಂಜನಪದವು,ಲೋಕೇಶ್ ಶಾಂತಿ, ಬೆಂಜನಪದವು ಶ್ರೀ ಕೊರಗ ತನಿಯ ಸಾನಿಧ್ಯದ ಧರ್ಮದರ್ಶಿ ವಿಜಯ ,ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಕಾರ್ಯದಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು, ಗ್ರಾ.ಪಂ. ಅಧ್ಯಕ್ಷ ವಾಮನ
ಆಚಾರ್ಯ, ತಾರಾನಾಥ ಕೊಟ್ಟಾರಿ, ಪ್ರೇಮ್ ಜಿತ್ ಶೆಟ್ಟಿ, ಪ್ರವೀಣ್, ಅಮ್ಮುಂಜೆ ಈಶ್ವರ ಬೆಲ್ಚಡ ಬೆಂಜನಪದವು, ಶೇಖರ ಸುವರ್ಣ, ಉಪಾಧ್ಯಕ್ಷ ವಾಮನ ಆಚಾರ್ಯ ಧಾರೆಕಟ್ಟೆ, ಮತ್ತು ರಾಧಾಕೃಷ್ಣ ತಂತ್ರಿ ಬೆಂಜನಪದವು, ಕೋಶಾಧಿಕಾರಿ ಪ್ರಶಾಂತ್ ಪೊಳಲಿ, ಸುರೇಶ್ ಕುಮ್ಡೇಲ್ ಮತ್ತಿತರರು ಉಪಸ್ಥಿತರಿದ್ದರು














