Coastal Bulletin

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್, ಜೆಸಿಐ ನೇತ್ರಾವತಿ ಜೋಡುಮಾರ್ಗ, ಇಂಟ್ರಾಕ್ಟ್ ಕ್ಲಬ್ ಇದರ ಸಹಯೋಗದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ದಂತ ಚಿಕಿತ್ಸ ಶಿಬಿರವು ಸೆ.9 ರಂದು ನಡೆಯಿತು.

ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷರಾದ ರೋ ಚಿತ್ತರಂಜನ್ ಶೆಟ್ಟಿ ಬೊಂಡಾಲ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಶಾಲೆಯ ಸುಮಾರು 100ಕ್ಕೂ ಅಧಿಕ ಮಕ್ಕಳು ಈ ಶಿಬಿರದ ಪ್ರಯೋಜನವನ್ನು ಪಡೆದರು.

ಈ ಸಂದರ್ಭದಲ್ಲಿ ರೋ ಉಮೇಶ್ ಆರ್ ಮೂಲ್ಯ, ರೋ ಸುರೇಶ್ ಸಾಲಿಯಾನ್,

,ರೋ ನಾಗೇಶ್ ಟೈಲರ್, ರೋ ಸುಕುಮಾರ್, ರೋ ಜಯರಾಜ್ ಎಸ್ ಬಂಗೇರ, ರೋ ಗಾಯತ್ರಿ ಲೋಕೇಶ್,ವೈದ್ಯಾಧಿಕಾರಿ ಡಾ ನವ್ಯ ಜಯ ದೀಪು, ಜೆಸಿಐ ನೇತ್ರಾವತಿ ಜೋಡುಮಾರ್ಗದ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್, ಪದಾಧಿಕಾರಿಗಳು, ರೋಟರಿ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು, ಮತ್ತಿತರರು ಉಪಸ್ಥಿತರಿದ್ದರು,

Leave a Comment