ಮಂಗಳೂರು : ಮುಳಿಯ ಜುವೆಲ್ಸ್ ನಿಂದ ಸೆ.9ರಂದು ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ವಿನೂತನ ಚಿನ್ನ ಮತ್ತು ವಜ್ರಭರಣಗಳ ಫ್ಯಾಷನ್ ಶೋ ಕಾರ್ಯಕ್ರಮ ಸಂಜೆ 6ರಿಂದ ನಡೆಯಲಿದೆ.
ಮುಳಿಯ ಜುವೆಲ್ಸ್ ನಿಂದ ಸೆ.8ರಿಂದ 11ರವೆರೆಗೆ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಆಯೋಜಿಸಲಾದ ಮುಳಿಯ ಚಿನ್ನಾಭರಣಗಳ ಹಾಗೂ ಕಿಸ್ನ ಡೈಮೆಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದ.ಕ.ಜಿಲ್ಲೆಯ 9 ಮಂದಿ ನಾರಿಯರು ಕಾರ್ಯಕ್ರಮ ಉದ್ಘಾಟಿಸಿ, ವಿನೂತನ ಶೈಲಿಯ ಚಿನ್ನಾಭರಣಗಳನ್ನು ಅನಾವರಣಗೊಳಿಸಿದರು.
ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಆಶಾ ಜ್ಯೋತಿ ರೈ ಮಾತನಾಡಿ, ಮುಳಿಯ ಜುವೆಲ್ಸ್ ನಲ್ಲಿ ಗುಣಮಟ್ಟದ ಆಭರಣಗಳಿಗೆ ಹೆಸರುವಾಸಿಯಾಗಿದೆ. ಸದ್ಯದಲ್ಲೇ ಮಂಗಳೂರಿನಲ್ಲಿಯೂ ತನ್ನ ಕಚೇರಿ ತೆರೆಯುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮುಳಿಯ ಸಂಸ್ಥೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ ಮುಳಿಯ ಮಾತನಾಡಿ, ಪ್ರದರ್ಶನದಲ್ಲಿ ಇತ್ತೀಚೆಗೆ ಜಾಗತಿಕವಾಗಿ ಅನಾರಣಗೊಳಿಸಲಾದ ಮತ್ತು ವಿನೂತನ ಶೈಲಿಯ ಆಭರಣಗಳನ್ನು ಸಂಗ್ರಹವಿದೆ ಎಂದರು.
ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ 5 ಸಾವಿರದಿಂದ 8ಲಕ್ಷಕ್ಕೂ ಮೇಲಿನ ಡೈಮಂಡ್ ಆಭರಣಗಳು ಲಭ್ಯವಿದೆ.
ಇಲ್ಲಿಯ ಆಭರಣಗಳು ಯುನಿಕ್ ಡಿಸೈನ್ ಗಳಾಗಿದ್ದು, ಕೆಲಸಗಾರರ ಪರ್ಫೆಕ್ಷನ್ ಮತ್ತು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕ ವ್ಯವಹಾರವನ್ನೂ ನಂಬಿಕೆಯನ್ನು ಹೆಚ್ಚಿಸಿದೆ. ಈ ಪ್ರದರ್ಶನ ಮತ್ತು ಮಾರಾಟ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಎಂದರು.
ಫೀಲ್ಡ್ ಸ್ಟಾರ್ ಪ್ರೈವೇಟ್ ಲಿ ನ ಸಿಇಒ ದೀಪ ಕಾಮತ್ , ಬಿಗ್ ಬ್ಯಾಗ್ ಇಂಡಿಯ ಪೈ.ಲಿ.ನ ಹೆಚ್ ಆರ್ ಮಮತಾ, ಮಹರಾಜ್ ಗ್ರೂಪ್ ಸಿಇಒ ಕೋಮಲ ಪ್ರಭು, ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ , ಚೇತನಾಸ್ ಬ್ಯೂಟಿ ಲಾಂಚ್ ನ ಚೇತನಾ, ಐವರಿ ಇಂಡಿಯಾ ಪೈ.ಲಿ.ನ ಟೆಕ್ನಿಕಲ್ ಡೆವಲಪ್ಮೆಂಟ್ ಮ್ಯಾನೇಜರ್ ಸುಮನಾ ಪೊಳಲಿ, ಫ್ಯಾಷನ್ ಡಿಸೈನರ್ ಪ್ರಜ್ಞ್ನಾ ಡಿ. ಎಸ್ , ವಿದುಷಿ ಶುಭಮನಿ ಚಂದ್ರಶೇಖರ್, ಇವರೆಲ್ಲರೂ ವಿನೂತನ ಮಾದರಿಯ ಚಿನ್ನಭರಣಗಳನ್ನು ಅನಾವರಣಗೊಳಿಸಿದರು.
ನಾಮದೇವ ಮಲ್ಯ , ಸಂಜೀವ ಉಪಸ್ಥಿತರಿದ್ದರು.ಇಷಾ ಮುಳಿಯ ಸ್ವಾಗತಿಸಿ, ಭವ್ಯ ನಿರೂಪಿಸಿದರು. ಸಲಹೆಗಾರ ವೇಣುಶರ್ಮ ವಂದಿಸಿದರು.















