Coastal Bulletin

ಮಂಗಳೂರು : ಮುಳಿಯ ಜುವೆಲ್ಸ್ ನಿಂದ ಸೆ.8ರಿಂದ 11ರವೆರೆಗೆ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಆಯೋಜಿಸಲಾದ ಮುಳಿಯ ಚಿನ್ನಾಭರಣಗಳ ಹಾಗೂ ಕಿಸ್ನ ಡೈಮೆಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದ.ಕ.ಜಿಲ್ಲೆಯ 9 ಮಂದಿ ನಾರಿಯರು ಕಾರ್ಯಕ್ರಮ ಉದ್ಘಾಟಿಸಿ, ವಿನೂತನ ಶೈಲಿಯ ಚಿನ್ನಾಭರಣಗಳನ್ನು ಅನಾವರಣಗೊಳಿಸಿದರು.

ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಆಶಾ ಜ್ಯೋತಿ ರೈ ಮಾತನಾಡಿ, ಮುಳಿಯ ಜುವೆಲ್ಸ್ ನಲ್ಲಿ ಗುಣಮಟ್ಟದ ಆಭರಣಗಳಿಗೆ ಹೆಸರುವಾಸಿಯಾಗಿದೆ.

ಸದ್ಯದಲ್ಲೇ ಮಂಗಳೂರಿನಲ್ಲಿಯೂ ತನ್ನ ಕಚೇರಿ ತೆರೆಯುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮುಳಿಯ ಸಂಸ್ಥೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ ಮುಳಿಯ ಮಾತನಾಡಿ, ಪ್ರದರ್ಶನದಲ್ಲಿ ಇತ್ತೀಚೆಗೆ ಜಾಗತಿಕವಾಗಿ ಅನಾರಣಗೊಳಿಸಲಾದ ಮತ್ತು ವಿನೂತನ ಶೈಲಿಯ ಆಭರಣಗಳನ್ನು ಸಂಗ್ರಹವಿದೆ ಎಂದರು.

Leave a Comment