ಮಂಗಳೂರು :ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ (ರಿ) ಉಳಾಯಿಬೆಟ್ಟು ಇದರ ವತಿಯಿಂದ ಮಾಜಿ ಶಾಸಕರಾದ ದಿ. ಎನ್. ಶಿವರಾವ್ ಇವರ ಸ್ಮರಣಾರ್ಥ 20 ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಮೇ 8ರಂದು ಆದಿತ್ಯವಾರ ಸಂಘದ ಕಚೇರಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪೆರ್ಮಂಕಿ ಪರಿಸರದ ಸುಮಾರು 75 ವಿದ್ಯಾರ್ಥಿಗಳು ಉಚಿತ ಪುಸ್ತಕ ಸೌಲಭ್ಯವನ್ನು ಪಡೆದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎನ್. ರವಿರಾಜ್ ರಾವ್, ಸಂಘದ ಅಧ್ಯಕ್ಷ ಪ್ರಶಾಂತ್ ಸಲ್ದಾನ, ಹರಿಕೇಶ್ ಶೆಟ್ಟಿ ಅಧ್ಯಕ್ಷರು ಉಳಾಯಿಬೆಟ್ಟು ಗ್ರಾಮ ಪಂಚಾಯತ್,
ದಿನೇಶ್ ಕುಮಾರ್ ಪೆರ್ಮಂಕಿ, ಶ್ರೀಧರ ಪೂಜಾರಿ ಬೇಟೆಮಾರು, ಲೋಹಿತ್, ತಾರೇಶ್ ಹಾಗೂ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶ್ರೀನಾಥ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತಾನಾಡಿದರು .ಸುನಿಲ್ ಕುಮಾರ್ ಸ್ವಾಗತಿಸಿ, ಪ್ರಸಾದ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.














