ಬಂಟ್ವಾಳ : 14ನೇ ವರ್ಷದ ಹೊನಲು ಬೆಳಕಿನ ಮೂಡೂರು ಪಡೂರು "ಬಂಟ್ವಾಳ ಕಂಬಳ"ಕ್ಕೆ ನಾವೂರ ಗ್ರಾಮದ ಕೂಡಿಬೈಲಿನಲ್ಲಿ ಫೆ. 8ರಂದು ಶನಿವಾರ ಸಮಿತಿಯ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜೋಡುಕರೆಯಲ್ಲಿ ದೀಪ ಬೆಳಗಿಸುವ ಚಾಲನೆ ನೀಡಿದರು.
ಪುರೋಹಿತ ಹರಿಪ್ರಸಾದ್ ಬೊಳ್ಳುಲಾಯ ಅವರು ಪೂಜೆ ನೆರವೇರಿಸಿದರು. ಮುಖ್ಯಅತಿಥಿ ಕರ್ನಾಟಕ ನವೀಕರಿಸ ಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ಸಾಂಪ್ರದಾಯಿಕ ಕ್ರೀಡೆಯಾ ಗಿರುವ ಕಂಬಳವು ಈ ಭಾಗದಲ್ಲಿ ಹಬ್ಬದ ರೀತಿಯಲ್ಲಿ ಆಯೋಜನೆಗೊಳ್ಳುತ್ತಿದೆ ಎಂದರು. ನಮ್ಮನಿಗಮಕ್ಕೆ ಮನವಿಸಲ್ಲಿಸಿದಲ್ಲಿ ಈ ಕಂಬಳಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕರಾವಳಿ ಭಾಗದ ಕಂಬಳವನ್ನು ಉದ್ಘಾಟಿಸಿದ ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ರೆ ಫಾ| ರಾಬರ್ಟ್ ಡಿ'ಸೋಜಾ ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಮಾತನಾಡಿ, ಕಂಬಳದಿಂದ ಧಾರ್ಮಿಕ ಸಾಮರಸ್ಯ ಮೂಡುತ್ತದೆ ಎಂದರು. ಉದ್ಘಾಟನ ಸಮಾರಂಭದಲ್ಲಿ ಫರ್ಲಾ ಚರ್ಚ್ ದರ್ಮಗುರು ಫಾ| ಮಾರ್ಕ್ కంబర ಅರುಣ್ ಡಿ'ಸೋಜಾ, ವಿಧಾನ సభాధ్యక్ష యు.. బాదం, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷಎ ಸಿ ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳಾದ ಎಂ. ಶಶಿಧರ ಹೆಗ್ಡೆ ಭಾಸ್ಕರ್ ಕೆ., ನಮ್ಮ ಕುಡ್ಲ ವ್ಯವಸ್ಥಾಪಕ ನಿರ್ದೇಶಕ ಲೀಲಾಕ್ಷ ಕರ್ಕೇರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಕೆಪಿಸಿಸಿ ಸದಸ್ಯ
ಪೃಥ್ವಿರಾಜ್ ಆರ್. ಕೆ.. ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಅಲಿನ್ ಡಿಸೋಜಾ, ಜಿ.ಪಂ.ಮಾಜಿ ಸದಸ್ಯ ಧರಣೇಂದ್ರ ಕುಮಾರ್, ಬಂಟ್ವಾಳೆ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಬೊರೆಟ್ಟೋ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಪ್ರಸ್ತಾವನೆಗೈದರು. ಪ್ರಾರಂಭದಲ್ಲಿ ಸ್ಥಳೀಯ ನಾಗಬನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಕಂಬಳದ ಗದ್ದೆಗೆ ಮೆರವಣಿಗೆಯಲ್ಲಿ ಆಗಮಿಸಲಾಯಿತು. ಕಂಬಳ ಸಮಿತಿ ಸಂಚಾಲಕ ಬಿ.ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತುರು, ಕೋಶಾಧಿಕಾರಿ ಪಿಲಿಫ್ ಫ್ರಾಂಕ್, ಉಪಾಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅವಿಲ್ ಮಿನೇಜಸ್, ಸುದೀಪ್ ಕುಮಾರ್ ಶೆಟ್ಟಿ ಚಂದ್ರಶೇಖರ ಭಂಡಾರಿ, ಬಿ.ಆರ್.ಅಂಚನ್, ಅಬ್ಬಾನ್ ಆಡಿ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮಾಣಿ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.














