Coastal Bulletin

ಬಂಟ್ವಾಳ:ಉಡುಪಿ-ಕಾಸರಗೋಡು ನಡುವೆ 400 ಕೆವಿ ಸಾಮಥ್ರ್ಯದ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಇಲ್ಲಿನ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ನೂರಾರು ಎಕರೆ ಜಮೀನು ಅಕ್ರಮವಾಗಿ ನಾಶ ಮಾಡಲು ಹೊರಟಿರುವ ಕಂಪೆನಿ ವಿರುದ್ಧ ಸಕರ್ಾರ ಕೂಡಲೇ ಕಡಿವಾಣ ಹಾಕಬೇಕು. ರೈತರ ಪೂವರ್ಾನುವತಿ ಇಲ್ಲದೆ ಸವರ್ೆ ಕಾರ್ಯ ನಡೆಸಿದ ಕಂಪೆನಿ ವಿರುದ್ಧ ಸ್ವತಃ ರೈತರೇ ತಿರುಗಿ ಬೀಳಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.

ಇಲ್ಲಿನ ಬಿಸಿ ರೋಡು ಆಡಳಿತ ಸೌಧ ದುರು ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಘದ ರಾಜ್ಯ ಕಾರ್ಯದಶರ್ಿ ಮನೋಹರ ಶೆಟ್ಟಿ ನಡಿ ಕಂಬಳಗುತ್ತು, ಜಿಲ್ಲಾ ಘಟಕ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲು ಗುತ್ತು. ಜಿಲ್ಲಾ ಗೌರವಾಧ್ಯಕ್ಷ ಧನಕೀತರ್ಿ ಬಲಿಪ, ಜಿಲ್ಲಾ ಕಾನೂನು ಸಲಹೆಗಾರ ವಕೀಲ ಎಸ್.ಪಿ.ಚಂಗಪ್ಪ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರೈತರ ನೋವಿಗೆ ಸಕರ್ಾರ ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ ,ತಾಲ್ಲೂಕು ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಮಂಗಳೂರು ತಾಲ್ಲೂಕು ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿ, ಪ್ರಮುಖರಾದ ಮುರುವ ಮಹಾಬಲ ಭಟ್, ರೋಷನ್ ಲೋಬೋ, ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ರೋಹಿತಾಶ್ವ ಭಂಗ ಮತ್ತಿತರರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಮತ್ತು ಸಹಾಯಕ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿದರು. ನಗರ ಠಾಣೆ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.

Leave a Comment