ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಫರಂಗಿಪೇಟೆಯ ಕಲ್ಲತಡಮೆಯಲ್ಲಿ ಪ್ರಾಚೀನ ರಕ್ತೇಶ್ವರಿ ಅಮ್ಮ ಮತ್ತು ಜುಮಾದಿ, ಬಂಟ ಮತ್ತು ಮೈಸಂದಾಯ ದೃೆವಗಳ ಸಾನಿಧ್ಯ ಗೋಚರಿಸಿದೆ. ಕೆಲವು ಸಮಯಗಳಿಂದ ಸ್ಥಳೀಯ ಕೆಲವು ಮನೆಗಳಲ್ಲಿ ಈ ಕುರಿತಾದ ಲಕ್ಷಣಗಳು ಕಂಡು ಬರುತ್ತಿತ್ತು. ಈಚೆಗೆ ಇಲ್ಲಿನ ನಿವಾಸಿಗಳು ಸೇರಿ ಫರಂಗಿಪೇಟೆಯ ಬಾಲಿಮಾರು ಕೋರ್ದಬ್ಬು ದೃೆವ ದರ್ಶನದಲ್ಲಿ ನಿವೇದಿಸಿದಾಗ ಮತ್ತು ತಾಂಬೂಲ ಪ್ರಶ್ನೆಇಟ್ಟಾಗ ಈ ಮೇಲಿನ ದೃೆವಗಳ ಸಾನಿಧ್ಯವನ್ನು ಉಲ್ಲೇಖಿಸಿ ಜೀರ್ಣೋದ್ಧಾರ ಮಾಡಲು ಮಾರ್ಗದರ್ಶನ ವಾಯಿತು. ನೂರಾರು ವರ್ಷಗಳ ಹಿಂದೆ ಇಲ್ಲಿಯ ಜೆೃನ ರಾಜಮನೆತನದಲ್ಲಿ ಈ ಸನ್ನಿಧಿಗಳು ಆರಾಧನೆಗೊಳ್ಳುತ್ತಿದ್ದವು ಹಾಗೂ ಪ್ರಸಕ್ತ ಸುಜೀರ್ ನಾಯಕ್ ಕುಟುಂಬದ ಮೂಲ ಮನೆಗಳಲ್ಲಿ ಒಂದಾಗಿರುವ ಕಲ್ಲತಡಮೆಯ ಚಾವಡಿ ಮನೆಯಲ್ಲಿ ಈ ಮೇಲಿನ ದೃೆವಗಳೊಂದಿಗೆ ಕಲ್ಲುರ್ಟಿ ಪಂಜುರ್ಲಿ ದೃೆವಗಳು, ಈ ಮನೆಯ ಹೊರ ಭಾಗದಲ್ಲಿ ನಾಗ ಮತ್ತು ರಕ್ತೇಶ್ವರಿ ಜೊತೆಗೆ ಚಾಮುಂಡಿ ಗುಳಿಗ ಮತ್ತು ಭೃೆರವ ಸನ್ನಿಧಿಗಳಿದ್ದವು ಎಂದು ತಾಂಬೂಲ ಪ್ರಶ್ನೆಯಲ್ಲಿ ಗೋಚರಿಸಿದೆ.
ಇವುಗಳಲ್ಲಿ ರಕ್ತೇಶ್ವರಿ ಅಮ್ಮ ಜುಮಾದಿ ಬಂಟ ಮೃೆಸಂದಾಯ ದೃೆವ ಮತ್ತು ಪಂಜುರ್ಲಿಯೊಂದಿಗೆ ಕಲ್ಲುರ್ಟಿ ದೃೆವ ಸೇರ್ಪಡೆಯ ಪುನ:ಪ್ರತಿಷ್ಠಾ ವಿಧಿಗಳು ಮತ್ತು ನೇಮ ಆಗಬೇಕಾಗಿವೆ. ಹಲವು ಪರಿಹಾರ ಕಾರ್ಯಗಳು ನಡೆಯಲಿರುವುದು ಬಾಲಾಲಯದಲ್ಲಿ
ದೃೆವಗಳ ಪ್ರತಿಷ್ಠಾಪನೆ ನಡೆದಿದ್ದು,ಜೀರ್ಣೋದ್ಧಾರದ ಸಮಿತಿಯು
ರಚನೆಗೊಂಡಿದೆ.ಈಚೆಗೆ ನಡೆಯಿತು. ಈ ವೇಳೆ ಈ ಕುರಿತಾದ ಹಿನ್ನೆಲೆ ಒಳಗೊಂಡ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಲಾಯಿತು.ಊರಗಣ್ಯರ ಸಮ್ಮುಖದಲ್ಲಿ ದೃೆವ ಸಾಣದ ಶಿಲಾನ್ಯಾಸ ಕಾರ್ಯಕ್ರಮ ಜರಗಿತು. ವಾಸ್ತು ಶಿಲ್ಪಿ ರಮೇಶ ಕಾರಂತರ ಮಾರ್ಗದರ್ಶನದಲ್ಲಿ ನಿರ್ಮಾಣ ಕಾರ್ಯಗಳು ಸಾಗಲಿವೆ.
















