ಬಂಟ್ವಾಳ :ಜೇಸಿಐ ಜೋಡುಮಾರ್ಗ ನೇತ್ರಾವತಿಯ ಸಭೆಯಲ್ಲಿ "ವರ್ಕ್ ಲೈಫ್ ಬ್ಯಾಲೆನ್ಸ್" ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರ ಇತ್ತೀಚಿಗೆ ಬಿ ಸಿ ರೋಡ್ ನ ಪ್ರೀತಿ ಕಾಂಪ್ಲೆಕ್ಸ್ ನ ಹಾಲ್ ನಲ್ಲಿ ನಡೆಯಿತು.
ಜೇಸಿ ವಲಯ ತರಬೇತುದಾರ ರಾಕೇಶ್ ಹೊಸಬೆಟ್ಟು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು, ಜೀವನ ಸಾಗಿಸಲು ಅಗತ್ಯವಾದ ಕೆಲಸದೊಂದಿಗೆ ಕೌಟುಂಬಿಕ ಜೀವನವನ್ನು ಹೊಂದಾಣಿಕೆಯಿಂದ ನಡೆಸಿಕೊಂಡು ಹೋಗುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಅಗತ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ಮುಖ್ಯ
ಅತಿಥಿಯಾಗಿ ಜೇಸಿ ಪೂರ್ವಾಧ್ಯಕ್ಷ ಅಹಮದ್ ಮುಸ್ತಾಪ ರವರು ಭಾಗವಹಿಸಿದ್ದರು.ಅಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ನಿಕಟ ಪೂರ್ವಾಧ್ಯಕ್ಷರಾದ ಶೈಲಜಾ ರಾಜೇಶ್ ರವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಕಿಶನ್ ರಾವ್ ವಂದಿಸಿದರು.














