ಬಂಟ್ವಾಳ :ತಾಲೂಕಿನ ಬಡಕಬೈಲ್ ಸೈಂಟ್ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪುಟಾಣಿಗಳ ಬೇಸಿಗೆ ಶಿಬಿರ ಸಂಭ್ರಮವು ಏ 04ರಿಂದ ರಿಂದ 06 ರವರೆಗೆ ಮೂರು ದಿನಗಳ ಕಾಲ ನಡೆಯಿತು.
ಏ 04ರಂದು ಬೆಳಿಗ್ಗೆ 9:30ಗೆ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಶಿಬಿರಕ್ಕೆ ಅತಿಥಿಯಾಗಿ ಆಗಮಿಸಿದ ಧರ್ಮಗುರು ಲೆಸ್ಲಿ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಶಾಲಾ ಸಂಚಾಲಕ ಧರ್ಮಗುರು
ರೆಜಿನಾಲ್ಡ್ ಡಿಮೆಲ್ಲೋ ಅಧ್ಯಕ್ಷತೆ ವಹಿಸಿಕೊಂಡು ಶುಭ ನುಡಿಗಳನ್ನು ನುಡಿದರು. ಶಾಲಾ ಪ್ರಾಂಶುಪಾಲ ಅರುಣ್ ಫ್ರಾನ್ಸಿಸ್ ಡಿಸೋಜ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾರ್ಯಕ್ರಮ ಪೂರಕವಾಗಲಿ ಎಂದು ಶುಭ ಹಾರೈಸಿದರು.














