ತುಂಬೆಕೋಡಿ:ಮಾ.10-12, ಶ್ರೀ ನಾಗರಾಜ ರಕೇಶ್ವರೀ ಹಾಗೂ ಗುಳಿಗ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ.

Coastal Bulletin
ತುಂಬೆಕೋಡಿ:ಮಾ.10-12, ಶ್ರೀ ನಾಗರಾಜ ರಕೇಶ್ವರೀ ಹಾಗೂ ಗುಳಿಗ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ.

ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ತುಂಬೆಕೋಡಿ ಎಂಬಲ್ಲಿ ಶ್ರೀ ನಾಗರಕೇಶ್ವರೀ ಸನ್ನಿಧಿಯಲ್ಲಿ ಶ್ರೀ ನಾಗರಾಜ ರಕೇಶ್ವರೀ ಹಾಗೂ ಗುಳಿಗ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಬ್ರಹ್ಮಶ್ರೀ ಪೊಳಲಿ ಸುಬ್ರಮಣ್ಯ ತಂತ್ರಿಗಳ ಪಾರೋಹಿತ್ಯದಲ್ಲಿ ಮಾರ್ಚ್ 10ರಿಂದ 12 2025 ರವರೆಗೆ ನಡೆಯಲಿದೆ.

ವೈದಿಕ ಕಾರ್ಯಕ್ರಮಗಳು:

ಮಾ. 10ರಂದು ಸಂಜೆ ಗಂಟೆ 5:30ರಿಂದ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಆಚಾರ್ಯಾದಿ ಋತ್ವಿಗ್ವರಣೆ. ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ,

ಮಾ 11ರಂದು ಬೆಳಿಗ್ಗೆ ಗಂಟೆ 8:30ರಿಂದ : ಗಣಪತಿ ಹೋಮ, ಬಿಂಬ ಶುದ್ದಿ, ಕಲಶ ಪೂಜೆ, ಕಲಶಾಭಿಷೇಕ ಇತ್ಯಾದಿ,ಸಂಜೆ 4:00ರಿಂದ : ಭಜನಾ ಕಾರ್ಯಕ್ರಮ,ಸಂಜೆ 5:30ರಿಂದ : ಬಿಂಬಾಧಿವಾಸ, ದುರ್ಗಾ ಪೂಜೆ, ಅಧಿವಾಸ, ಹೋಮಗಳು

ಮಾ. 12ರಂದು ಬೆಳಿಗ್ಗೆ ಗಂಟೆ 7:00ರಿಂದ : ಪ್ರತಿಷ್ಠಾ ಹೋಮ, ಪವಮಾನ ಹೋಮ,

ಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಆಶ್ಲೇಷಾ ಬಲಿ,ಬೆಳಿಗ್ಗೆ ಗಂಟೆ 10:47ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ನಾಗರಾಜ ರಕೇಶ್ವರೀ ಹಾಗೂ ಗುಳಿಗ ಸಾನಿಧ್ಯಗಳ ಪುನಃ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಕಲಶಾಭಿಷೇಕ,ಬ್ರಹ್ಮಕಲಶಾಭಿಷೇಕ ಮಧ್ಯಾಹ್ನ ಗಂಟೆ 12:00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ವಿ.ಸೂ. : ಅನ್ನದಾನಕ್ಕಾಗಿ ಹಸಿರು ಹೊರೆ ಕಾಣಿಕೆ ನೀಡುವವರು ತಾ. 10-3-2025ನೇ ಸೋಮವಾರ ಮಧ್ಯಾಹ್ನದ ಒಳಗೆ ಸಾನಿಧ್ಯಕ್ಕೆ ನೀಡಿ ಸಹಕರಿಸಬೇಕಾಗಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment