Coastal Bulletin

ಬಂಟ್ವಾಳ: ತಾಲೂಕಿನ ಕೊಡ್ಮಾಣ್ ಗ್ರಾಮದ ಕೊಟ್ಟಿಂಜ ದಲ್ಲಿರುವ ಶ್ರೀ ರಾಮ ಮಂದಿರದ 17ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮವು ಮಾ.13 ರಂದು ಸೋಮವಾರ ಮಂದಿರದ ವಠಾರದಲ್ಲಿ ನಡೆಯಲಿದೆ.

ಬೆಳಿಗ್ಗೆ 9 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇರಲಿದೆ. ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ 4ರಿಂದ ಭಜನಾ ಸಂಕಿರ್ತನೆ,ನಂತರ 6ಗಂಟೆಗೆ ಚೌಕಿ ಪೂಜೆ ನಡೆದು,ಖ್ಯಾತ ಭಾಗವತರಾದ

ಸತೀಶ್ ಶೆಟ್ಟಿ ಪಟ್ಲ ನೇತ್ರತ್ವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ "ನಾಗ ಸಂಜೀವನ" ಎಂಬ ಕಾಲಮಿತಿಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment