Coastal Bulletin

ಬಂಟ್ವಾಳ :ಓಂ ಶ್ರೀ ಗೆಳೆಯರ ಬಳಗ(ರಿ) ನಾಯಿಲ ನರಿ ಕೊಂಬು ಇದರ 17ನೇ ವರ್ಷದ ವಾರ್ಷಿಕೋತ್ಸವವು ಫೆ.4ರಂದು ಶನಿವಾರ ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ನಾಗೇಶ್ ಕುಲಾಲ್ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಂಜೆ ಸ್ಥಳಿಯ ಮಕ್ಕಳಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ನಂತರ ಸಂಘದ ಸಾರ್ವಜನಿಕ ಶೌಚಾಲಯದ ಉದ್ಘಾಟನೆಯನ್ನು ನರಿಕೊಂಬು ಗ್ರಾ ಪಂ ಅಧ್ಯಕ್ಷರಾದ ವಿನುತ ಪುರುಷೋತ್ತಮ್ ನಡೆಸಿಕೊಟ್ಟರು. ವೇದಿಕೆಯಲ್ಲಿ ನಾಯಿಲ ಅಂಗನವಾಡಿ ಮತ್ತು ಸ್ಥಳೀಯ ಬಾಲ ಪ್ರತಿಭೆಗಳಿಂದ ಮತ್ತು ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂತ್ರದೇವತೆ ಸಾನಿಧ್ಯ ಕಟ್ಟೆಮಾರ್ ಇದರ ಧರ್ಮದರ್ಶಿ ಮನೋಜ್ ಕಟ್ಟೆ ಮಾರ್ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಮುಖ್ಯ ಅತಿಥಿಗಳಾದ ಸಿವಿಲ್ ಇಂಜಿನಿಯರ್ ಪ್ರಣಾಮ್ ಪೊಳಲಿ ಮಾತನಾಡಿ ಸಂಘ ಸಂಸ್ಥೆಗಳ ಪ್ರಯೋಜನ ಹಾಗೂ ಜವಾಬ್ದಾರಿಗಳ ಬಗ್ಗೆ ತಿಳಿ ಹೇಳಿದರು.ಕುಂಬಾರರ ಗುಡಿ ಕೈಗಾರಿಕ ಸಹಕಾರಿ ಸಂಘ ನಿ. ಮಳಲಿ ಇದರ ಅಧ್ಯಕ್ಷರಾದ ಸುಂದರ ಬಂಗೇರ ಮಾತನಾಡಿ ಈ

ಸಂಘವು 17 ವರ್ಷದಲ್ಲಿ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿದ್ದು ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿ ಶ್ಲಾಘನೀಯ ಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಕ್ರೀಡಾಕೂಟಗಳ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಚಲನಚಿತ್ರ ನಟ ಪ್ರಕಾಶ್ ತುಮಿನಾಡು,ಕ್ರಿಕೆಟ್ ಆಟಗಾರ ಸಂತೋಷ್ ಕುಮಾರ್, ಬಂಟ್ವಾಳ, ನಾಟಿವೈದ್ಯ ಗಿರಿಜಾ ನಾಯಿಲ ಅಂಗನವಾಡಿ ಶಿಕ್ಷಕಿ ಸುಧಾಬಲಿಪ, ವಿದ್ಯಾರ್ಥಿನಿಯಾದ ಕುಮಾರಿ ಲಿಖಿತ, ಕುಣಿತ ಭಜನೆ ಶಿಕ್ಷಕ ಶ್ರೀ ಗಣೇಶ್ ಅಂತರ ಮತ್ತು ಸಿವಿಲ್ ಇಂಜಿನಿಯರ್ ಶೈಲೇಶ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಗದೀಶ್ ಬಜಾರ್ ಉದ್ಯಮಿ, ರಾಮ ಗಣೇಶ್ ಅಟೋ ವರ್ಕ್ಸ್ ಮಾಲಕರಾದ ಉಮೇಶ್ ನೆಲ್ಲಿಗುಡ್ಡೆ, ನರಿಕೊಂಬು ಪಂಚಾಯತ್ ಸದಸ್ಯರಾದ ಶ್ರೀ ಅರುಣ್ ಬೋರ್ ಗುಡ್ಡೆ, ಉಷಾಲಾಕ್ಷಿ ರಮನಾಥ, ಮಮತಾ ಸುಧೀರ್ ಉಪಸ್ಥಿತರಿದ್ದರು.

ಸಂಘದ ಸದಸ್ಯ ಕಿರಣ್ ಅಟ್ಲುರು ಸ್ವಾಗತಿಸಿ ಧನುಷ್ ಸಂಘದ ವರದಿ ವಾಚಿಸಿದರು,ನಾಗೇಶ್ ಕುಲಾಲ್ ವಂದಿಸಿದರು, ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ತಾಂಬೂಲ ಕಲಾವಿದರು ಪೂಂಜಾಲಕಟ್ಟೆ ಇವರಿಂದ ಪರಿಮಳ ಕಾಲೋನಿ ತುಳು ಹಾಸ್ಯಮಯ ನಾಟಕ ಪ್ರದರ್ಶಿಸಲಾಯಿತು

Leave a Comment