ಬಂಟ್ವಾಳ :ಫರಂಗಿಪೇಟೆಯ ವಿಜಯನಗರದಲ್ಲಿ ನೂತನ ನಿರ್ಮಾಣವಾಗುತ್ತಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವವು ಜನವರಿ 21 ರಿಂದ 25ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಂಜನೇಯ ದೇವರ ಹಾಗೂ ಗಣಪತಿ ದೇವರ ನೂತನ ಶೀಲಾಮಯ ವಿಗ್ರಹದ ಪುರಪ್ರವೇಶೋತ್ಸವವು ಜ.7ರಂದು ಆದಿತ್ಯವಾರ ಸಂಜೆ ನಡೆಯಿತು.
ಕಡೆಗೋಳಿ ಶ್ರೀ ರಾಜರಾಜೇಶ್ವರಿ ಮಹಾದ್ವಾರದಿಂದ ಅರ್ಚಕರಾದ ಮುರಳಿ ಭಟ್ ಕಲ್ಲತಡಮೆ ಅವರು ಪ್ರಾರ್ಥಿಸಿ, ಬಳಿಕ ವಿಗ್ರಹವನ್ನು ಭವ್ಯ ಶೋಭಾ ಯಾತ್ರೆಯ ಮೂಲಕ ಫರಂಗಿಪೇಟೆ ಆಂಜನೇಯ ಸನ್ನಿದಿಗೆ ಚೆಂಡೆ, ಜಾಗಟೆ, ತಾಲಿಮು, ಕುಣಿತ ಭಜನೆಯೊಂದಿಗೆ ಸಹಸ್ರಾರು ಭಗವದ್ಭಕ್ತರ ಸಮ್ಮುಖದಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ನಿರ್ಮಾಣಸಮಿತಿ ಗೌರವ ಅಧ್ಯಕ್ಷರಾದ ಐತಪ್ಪ ಆಳ್ವ ಸುಜೀರುಗುತ್ತು, ನಿರ್ಮಾಣ ಸಮಿತಿಯ ಅಧ್ಯಕ್ಷ ಅಜಿತ್ ಚೌಟ ದೇವಸ್ಯ, ಬ್ರಹ್ಮ ಕಲಶ ಸಮಿತಿಯ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಸಂಚಾಲಕ ವಿಠ್ಠಲ್ ಆಳ್ವ ಗರೋಡಿ
,ಕಾರ್ಯಾಧ್ಯಕ್ಷ ಅರ್ಕುಳ ಕಂಪ ಸದಾನಂದ ಆಳ್ವ ,ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷ ಚಂದ್ರಶೇಖರ ಗಂಭೀರ , ದೇವಸ್ಯ ಪ್ರಕಾಶ್ ಚಂದ್ರ ರೈ, ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ,ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು, ಕೃಷ್ಣ ಕುಮಾರ್ ಪೂಂಜಾ,.ಕರುಣಾಕರ ಕೊಟ್ಟಾರಿ, ಪ್ರಭಾಕರ ಮಾಸ್ಟರ್, ಸಂಚಾಲಕ ಜಯರಾಜ್ ಕರ್ಕೆರ ಮಂಟಮೆ, ಮಾಧವ ನಾಯ್ಕ್ ಆರ್ ಕೆ,ಪುರುಷೋತ್ತಮ ಭಂಡಾರಿ ಅಡ್ಯಾರ್,ಸುಂದರ ಶೆಟ್ಟಿ ಕಲ್ಲತಡಮೆ,ದಿನೇಶ ಚಂದ್ರ ಬರ್ಕೆ,ಜಯರಾಮ ಕೊಟ್ಟಾರಿ ಧರ್ಮಗಿರಿ, ಮನೋಜ್ ತುಪ್ಪೆಕಲ್ಲು, ಅಶೋಕ್ ಶೆಟ್ಟಿ ಸುಜೀರ್ ಗುತ್ತು , ರಾಮಚಂದ್ರ ಬಂಗೇರ, ಪಿ ಸುಬ್ರಮಣ್ಯ ರಾವ್, ಗಣೇಶ ಸುವರ್ಣ ತುಂಬೆ, ಪುರುಷ ಎನ್ ಸಾಲ್ಯಾನ್,ಸಂತೋಷ ಗಾಂಭೀರ,ಧನರಾಜ್, ಜಗದೀಶ ಕಡೆಗೋಳಿ,ಕವಿತಾ ದೇವದಾಸ್,ಭುವನೇಶ್ವರಿ ಶೆಟ್ಟಿ, ಜಯಶ್ರೀ ಕರ್ಕೇರ, ಪದ್ಮಾವತಿ ತುಪ್ಪಕಲ್ಲು ಮತ್ತಿತರರು ಉಪಸ್ಥಿತರಿದ್ದರು.














