ವಿಟ್ಲ : ಸಾಲೆತ್ತೂರಿನಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನಿಗೆ ಉಪ್ಪಳದ ಮುಸ್ಲಿಂ ಯುವಕ ಮದುಮಗ ಬಾತೀಷ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ತನ್ನ ತಪ್ಪಿನ ಅರಿವಾಗಿ ಹಿಂದೂ ಸಮಾಜದ ಕ್ಷಮೆ ಕೇಳಿದ್ದಾನೆ.
"ತಾನು ತಮಾಷೆಗಾಗಿ ಈ ಕೃತ್ಯ ಎಸಗಿದ್ದು ಸಮಾಜದಲ್ಲಿ ಇದೊಂದು ಹಿಂದೂ ಸಮಾಜಕ್ಕೆ ಇಷ್ಟೊಂದು ನೋವುಂಟುಮಾಡುವ ಘಟನೆಯಾಗುತ್ತೆ ಎಂದು ತಿಳಿದಿರಲಿಲ್ಲ. ಸಮಸ್ತ ಹಿಂದೂ ಸಮಾಜ,ಕೊರಗ ಸಮುದಾಯ ಹಾಗೂ ಮುಸ್ಲಿಂ ಸಮಾಜದವರಲ್ಲಿ ಕ್ಷಮೆ ಕೇಳುತ್ತಾ ಮುಂದೆ ಇಂತಹ ವಿಷಯದಲ್ಲಿ ಪ್ರೋತ್ಸಾಹ ಹಾಗೂ ಕೃತ್ಯಗಳನ್ನು ಮಾಡುವುದಿಲ್ಲ ಇದುವೇ ಕೊನೆಯದಾಗಲಿದೆ ಎಂದು ಪ್ರಮಾಣ ಮಾಡುತ್ತೇನೆ" ಎಂದು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ.
ಕೊಳ್ನಾಡಿನ ಅಝೀಝ್ ಎಂಬವರ
ಮಗಳ ಮದುವೆಯಲ್ಲಿ ಇದು ನಡೆದಿದ್ದು, ಮಂಜೇಶ್ವರ ತಾಲೂಕಿನ ಉಪ್ಪಳ ದ ವರನ ಜೊತೆ ಮದುವೆಯಾಗಿದ್ದು,ಔತಣ ಕೂಟವನ್ನು ಏರ್ಪಡಿಸಿದ್ದರು. ಆ ದಿನ ಮುಸ್ಲಿಂ ಸಂಪ್ರದಾಯದಂತೆ 50 ಸ್ನೇಹಿತರೊಂದಿಗೆ ವರ ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜ ನ ವೇಷ ಧರಿಸಿ ಕುಣಿಯುತ್ತಾ ಆಗಮಿಸಿದ್ದ ವಿಡಿಯೋ ವೈರಲ್ ಆಗಿತ್ತು.
ಹಿಂದೂ ಹಾಗೂ ಮುಸ್ಲಿಮರ ತೀವ್ರವಾದ ವಿರೋಧಕ್ಕೆ ಕಾರಣವಾದ ಈ ಪ್ರಕರಣ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡಿತ್ತು.













