Coastal Bulletin

ಬೆಂಗಳೂರು: ಲಾಕ್ ಡೌನ್ ಎಂಬುವುದು ಮುಗಿದ ಅಧ್ಯಾಯವಾಗಿದ್ದು, ಕೋವಿಡ್ ನಿಯಂತ್ರಣ ಮಾಡಲು ಪರಿಹಾರವಲ್ಲ. ಭವಿಷ್ಯದಲ್ಲಿ ಎಂದಿಗೂ ಲಾಕ್ ಡೌನ್ ಮಾಡಲ್ಲ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಆರಂಭದಲ್ಲಿ ಕೋವಿಡ್ ಸೋಂಕಿನ ಬಗ್ಗೆ ಹೆಚ್ಚೇನೂ ಗೊತ್ತಿರದ ಕಾರಣದಿಂದಾಗಿ ಲಾಕ್ಡೌನ್ ಮಾಡಲಾಗಿತ್ತು. ವೈರಸ್ ಬಗ್ಗೆ, ಅದರ ಚಿಕಿತ್ಸೆಯ ಬಗ್ಗೆ ತಿಳಿಯದ ಕಾರಣ ಲಾಕ್ ಡೌನ್ ಜಾರಿಮಾಡಲಾಗಿತ್ತು. ಮುಂದೆ ಎಂದಿಗೂ ಈ ರೀತಿಯ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದರು. ಲಾಕ್ ಡೌನ್ ಮಾಡುವುದರಿಂದ ವೈರಸ್ ತಡೆಯಲು ಸಾಧ್ಯವಿಲ್ಲ. ಲಸಿಕೆ ಮತ್ತು ಮುನ್ನೆಚ್ಚರಿಕೆ ಕ್ರಮದಿಂದ ಮಾತ್ರ ಕೋವಿಡ್ ಎದುರಿಸಲು ಸಾಧ್ಯ. ಓಮಿಕ್ರಾನ್ ವೈರಸ್ ಹರಡುವುದನ್ನು

ತಡೆಯುವುದು ಸಾಧ್ಯವಿಲ್ಲ ಸಹಜವಾಗಿ ಪ್ರಕರಣಗಳು ಹೆಚ್ಚಾಗಲಿದೆ. ಆದರೆ ಇದರಿಂದ ಗಂಭೀರ ಅಪಾಯ ಎದುರಾಗುವುದಿಲ್ಲ. ಜನರು ಮುನ್ನೆಚ್ಚರಿಕೆಯಿಂದ ಇರಬೇಕು ಅಷ್ಟೇ ಎಂದು ಹೇಳಿದರು. ರಾಜ್ಯದಲ್ಲಿ ಕೋವಿ ಪಾಸಿಟಿವ್ ರೇಟ್ ಹೆಚ್ಚಾಗುತ್ತಿದೆ. ಸದ್ಯಕ್ಕೆ 3.95 ಇದ್ದು ಮುಂದೆ ಇನ್ನಷ್ಟು ಹೆಚ್ಚಾಗಲಿದೆ. ಇದರ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ಕೋವಿಡ್ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ, ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಡಾ. ಸುಧಾಕರ್ ತಿಳಿಸಿದ್ದಾರೆ. ಲಸಿಕೆಯನ್ನು ಪಡೆಯುವುದರಿಂದ ಕೋವಿಡ್ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.

Leave a Comment