Coastal Bulletin

ಬಂಟ್ಟಾಳ: ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಲ್ ಕಟ್ಟೆ ಎಳೆಯರ ಬಳಗ ಮತ್ತು ಮಹಿಳಾ ಮಂಡಳಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 'ಪುಸ್ತಕ ಗೂಡು' ಉದ್ಘಾಟನೆ ಕಾರ್ಯಕ್ರಮ ಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ಬಿ. ಚಾಲನೆ ನೀಡಿದರು.

ಪುಸ್ತಕ ಓದುವುದರಿಂದ ಜ್ಙಾನ ಭಂಡಾರ ಹೆಚ್ಚಳವಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಪಿಡಿಒ ಚಂದ್ರಾವತಿ ಶುಭ ಹಾರೈಸಿದರು.

ಪ್ರಮುಖರಾದ ಕೆ.ಕೃಷ್ಣ ಕುಮಾರ್ ಪೂಂಜಾ , ಪೊಳಲಿ ಗಿರಿ ಪ್ರಕಾಶ್ ತಂತ್ರಿ , ಚಂದ್ರಶೇಖರ ಗಾಂಭೀರ, ಸದಾಶಿವ ಡಿ. ತುಂಬೆ,

ಸಂಘದ ಅಧ್ಯಕ್ಷ ಪೂಜೇಶ್ ಆಚಾರ್ಯ, ಉಮೇಶ್ ರೆಂಜೋಡಿ , ಕಿಶೋರ್ ರಾಮಲ್ ಕಟ್ಟೆ, ಜಯಂತಿ ಶ್ರೀಧರ, ಕೇಶವ ಪೇರ್ಲಬೈಲ್, ಸಂಜೀವ ಪೂಜಾರಿ, ಸಂತೋಷ್ ರಾಮಲ್ ಕಟ್ಟೆ, ಆರ್.ಎಸ್.ಜಯ , ಶೇಖರ ರಾಮಲ್ ಕಟ್ಟೆ, ಪದ್ಮನಾಭ ಬೆಳ್ಚಡ, ಮಾಧವ ಬರೆ ಮತ್ತಿತರರು ಉಪಸ್ಥಿತರಿದ್ದರು.

Leave a Comment