ಬಂಟ್ವಾಳ :ನಾಯಕತ್ವದ ಗುಣದೊಂದಿಗೆ ಎಲ್ಲರ ಕಷ್ಟಕ್ಕೆ ಸ್ಪಂದಿಸುವ ರವಿಯಣ್ಣನ ಪಾತ್ರ ಸು ಫ್ರಮ್ ಸೊ ಸಿನಿಮಾದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಅಂತಹ ವ್ಯಕ್ತಿ ನಿರ್ಮಾಣ ಕಾರ್ಯ ಇಂತಹ ಸಂಘಟನೆಗಳಿಂದ ಆಗಬೇಕಿದೆ, ಸಮಾಜಮುಖಿ ಸೇವೆಯೊಂದಿಗೆ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮಹತ್ತರ ಕೆಲಸ ಮಾಡುತ್ತಿರುವ ಈ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಸು ಫ್ರಮ್ ಸೊ ಸಿನಿಮಾ ಖ್ಯಾತಿಯ ಜೆ ಪಿ ತೂಮಿನಾಡು ಹೇಳಿದರು.
ಅವರು ವಿಶ್ವಜ್ಯೋತಿ ಯುವಕ ಸಂಘ ಮತ್ತು ಮಾತೃ ಮಂಡಳಿ (ರಿ) ವಳವೂರು ತುಂಬೆ ಇದರ ನೂತನ ಕಟ್ಟಡದ ಉದ್ಘಾಟನೆಯ ಅಂಗವಾಗಿ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಯೋತಿಷಿ ಅನಿಲ್ ಕೆ ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ಸಂಘಟನೆಯ ಯುವಕರು ಎಲ್ಲರೂ ಒಟ್ಟಿಗೆ ಸೇರಿ ಸಮಾಜಕ್ಕಾಗಿ ಹಗಲಿರುಳು ಕಷ್ಟಪಟ್ಟು ದುಡಿದು ಇಂದು ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು ,ವಕೀಲರಾದ ರಮೇಶ್ ಉಪಾಧ್ಯಯ,ತಾ ಪಂ ಮಾಜಿ ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ತರಕೆರೆ,ಸಾಮಾಜಿಕ ಕಾರ್ಯಕರ್ತ ಗೋಪಾಲ ಕುಲಾಲ್
ಗೋವಿಂತೋಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರಿಯದರ್ಶಿನಿ ಸುನಿಲ್ ದಾರಿಬಾಗಿಲು,ಗಣೇಶ್ ಸುವರ್ಣ ತುಂಬೆ,ಗೌರವ ಸಲಹೆಗಾರರಾದ ಸುಂದರ್ ಪೂಜಾರಿ ವಲವೂರು,ಸಂಜೀವ ಪೂಜಾರಿ ವಲವೂರು, ಸಂಘದ ಅಧ್ಯಕ್ಷ ಪೂವಪ್ಪ ವಲವೂರು,ಮಾತೃ ಮಂಡಳಿಯ ಅಧ್ಯಕ್ಷೆ ರಂಜಿನಿ ಉಮನಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕ ರಾಜೇಶ್ ನಾಯ್ಕ್ ಭೇಟಿ ಕೊಟ್ಟು ಶುಭ ಹಾರೈಸಿದರು.
ಹಿರಿಯರಾದ ಸುಂದರ್ ಪೂಜಾರಿ ವಲವೂರು, ಸಂಜೀವ ಪೂಜಾರಿ ವಲವೂರು, ಪೂವಪ್ಪ ವಲವೂರು,ಕೌಶಿಕ್ ವಲವೂರು ಇವರನ್ನು ಸನ್ಮಾನಿಸಲಾಯಿತು,ಅಶಕ್ತರಿಗೆ ಆರ್ಥಿಕ ಸಹಕಾರ ನೀಡಲಾಯಿತು,
ಅಕ್ಬರ್ ಅಲಿ ಸನ್ಮಾನಿತರ ಪಟ್ಟಿ ವಾಚಿಸಿದರು, ಪ್ರದೀಪ್ ಬ್ರಹ್ಮರಕೊಟ್ಲು ವರದಿ ವಾಚಿಸಿ, ಭರತ್ ಉಮನಗುಡ್ಡೆ ವಂದಿಸಿದರು, ಜಗದೀಶ ಕಡೆಗೋಳಿ ಕಾರ್ಯಕ್ರಮ ನೀರೂಪಿಸಿದರು.

















