ಬಂಟ್ವಾಳ :ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ( NDLI) ತಂತ್ರಾಂಶದ ಬಗ್ಗೆ ಬಳಕೆದಾರರ ತರಬೇತಿ ಕಾರ್ಯಾಗಾರವನ್ನು ಇತ್ತೀಚಿಗೆ ಏರ್ಪಡಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲಗಳ ವ್ಯಕ್ತಿಯಾಗಿದ್ದ ತೊಂಟದಾರ್ಯ ಇಂಜಿನಿಯರಿಂಗ್ ಕಾಲೇಜು ಗದಗ ಇಲ್ಲಿನ ಮುಖ್ಯ ಗ್ರಂಥಪಾಲಕ ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಮಂಜುನಾಥ.ಬಾ. ಉತ್ತರಕರ, ಮಾತನಾಡಿ ತಂತ್ರಾಂಶದ ಸದ್ಬಳಕೆಯ ಕುರಿತು ಮಾಹಿತಿ ನೀಡುತ್ತಾ, ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (NDLI) ಕಲಿಕೆಯ ಸಂಪನ್ಮೂಲಗಳ ವಾಸ್ತವ ಭಂಡಾರವಾಗಿದ್ದು, ಇದು ಕೇವಲ ಹುಡುಕಾಟ, ಬ್ರೌಸಿಂಗ್, ಸೌಲಭ್ಯ ಹೊಂದಿರುವುದು ಮಾತ್ರವಲ್ಲದೆ ಓದುಗ ಸಮುದಾಯಕ್ಕೆ ಹಲವಾರು ಸೇವೆಗಳನ್ನು ಒದಗಿಸುತ್ತದೆ. ಇದನ್ನು ಮಾಹಿತಿ ಮತ್ತು ತಂತ್ರಜ್ಞಾನ ಮೂಲಕ ಶಿಕ್ಷಣದ ರಾಷ್ಟ್ರೀಯ ಮಿಷನ್ ನಿಂದ ಭಾರತ ಸರಕಾರದ ಶಿಕ್ಷಣ ಸಚಿವಾಲಯ ಪ್ರಾಯೋಜಿಸಿ ಮಾರ್ಗದರ್ಶನ ನೀಡಿದೆ ಎಂದರು.
ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಕ್ಲಬ್
ಗೆ ಸುಮಾರು 1000ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿದ್ದು 200ಕ್ಕೂಹೆಚ್ಚು ವಿದ್ಯಾರ್ಥಿಗಳು ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ ಭಟ್ ಉದ್ಘಾಟಿಸಿದರು,ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ ಸತೀಶ್ ಕುಮಾರ್ ಉಪಸ್ಥಿತರಿದ್ದರು. ಗ್ರಂಥಾಪಾಲಕಿ ಹಾಗೂ ಎನ್ ಡಿ ಎಲ್ ಐ ನ ಸಂಯೋಜಕಿ ಭವಾನಿ ಕೆ ಸ್ವಾಗತಿಸಿ, ಮೆಕ್ಯಾನಿಕಲ್ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಎಂ ವಿ ವಂದಿಸಿದರು.ಎನ್ ಡಿ ಎಲ್ ಐ ನ ಕಾರ್ಯದರ್ಶಿ ಸಹಾಯಕ ಪ್ರಾಧ್ಯಾಪಕಿ ತಾರಾ ಬಿ ಕಾರ್ಯಕ್ರಮ ನಿರೂಪಿಸಿದರು.
ಸಹಾಯಕ ಪ್ರಾಧ್ಯಾಪಕರು ಹಾಗೂ ಸಮಿತಿ ಸದಸ್ಯರಾದ ,ವಸಂತ್ ನಾಯಕ್,ಸ್ವಾತಿ ಕೆ , ವಿದ್ಯಾಲಕ್ಷ್ಮಿ,ಪಿ ಬಿ,ಶ್ಯಾಮಲಾ,ರಜಿತಾ ಎ ಎ, ಸಹಕರಿಸಿದರು














