Coastal Bulletin

ಬಂಟ್ವಾಳ: ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತವು 2021-22 ಸಾಲಿನಲ್ಲಿ 207.80 .ಕೋಟಿ ವ್ಯವಹಾರ ನಡೆಸಿ 75.57 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ನಿಯಮಿತದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದ್ದಾರೆ.

ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಎರಡು ವರ್ಷದಲ್ಲಿ ಕೊರೋನದಿಂದಾಗಿ ರಾಷ್ಟ್ರ ಮಟ್ಟದಲ್ಲೇ ಕ್ಷೀಣಿಸಿದ್ದ ಆರ್ಥಿಕ ಚಟುವಟಿಕೆ ಪುನಶ್ವೇತನವನ್ನು ಕಂಡಿದ್ದು, ನಮ್ಮ ಸಂಘ ಕೂಡ 2021 22 ಸಾಲಿನಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಆಶಾದಾಯಕ ಬೆಳವಣಿಗೆಯನ್ನು ಕಂಡಿದೆ ಎಂದರು.

ಸಂಘವು 47,91 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಈ ವರ್ಷದಲ್ಲಿ ರೂ.41.00 ಕೋಟಿ ಸಾಲ ವಿತರಿಸಲಾಗಿದ್ದು, ಶೇ. 90 ರಷ್ಟು ಸಾಲ ವಸೂಲಿ ಯಾಗಿರುತ್ತದೆ ಎಂದು ವಿವರಿಸಿದರು.

ನಿಯಮಿತವು ಬಂಟ್ವಾಳ ತಾಲೂಕಿನಲ್ಲಿ 9 ಶಾಖೆಗಳನ್ನು ಹೊಂದಿದ್ದು, ಅತೀ ಶೀರ್ಘದಲ್ಲಿ ತಾಲೂಕಿನ ಪೆರ್ನೆಯಲ್ಲಿ 10 ನೇ ಶಾಖೆಯನ್ನು ತೆರೆಯಲಾಗುವುದು ಎಂದ ಅವರು ಸಂಸ್ಥೆಯು ಇದೀಗೆ ಜಿಲ್ಲಾ ಮಟ್ಟದ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಬೆಳ್ತಂಗಡಿ ತಾ.ನ ಕಣ್ಣೀರಿ ಮತ್ತು ಮೂಡಬಿದರೆ ತಾ.ನ ಆಲಂಗಾರಿನಲ್ಲಿ ಶಾಖೆಯನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದೆ

ಎಂದರು.

ಮಾವಿನಕಟ್ಟೆ ಮತ್ತು ಬೆಂಜನಪದವು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2023-24 ನೇ ಸಾಲಿನಲ್ಲಿ ಸಂಸ್ಥೆಗೆ 20 ವರ್ಷ ತುಂಬುವ ಹಿನ್ನಲೆಯಲ್ಲಿ ಬಂಟ್ವಾಳದಲ್ಲಿ ಕೇಂದ್ರ ಕಚೇರಿಯನ್ನು ಸ್ವಂತ ಕಟ್ಟಡದಲ್ಲಿಯೇ ನಿರ್ವಹಿಸುವ ಯೋಜನೆ ಹಾಕಿ ಕೊಳ್ಳಲಾಗಿದೆ. ಈ ಸಂದರ್ಭ ಅರ್ಥಪೂರ್ಣ ಸಹಕಾರಿ ಸಂಭ್ರಮವನ್ನು ಆಯೋಜಿಸಲು ಯೋಚಿಸಲಾಗಿದೆ ಎಂದರು.

ಬ್ಯಾಂಕಿಂಗ್ ಚಟುವಟಿಕೆಗೆ ಹೊರತಾಗಿ "ಸೆಕ್ಯೂರಿಟಿ ಸರ್ವಿಸ್"ಉದ್ಯಮವನ್ನು ಆರಂಭಿಸುವ ಮೂಲಕ ಈ ಭಾಗದ ಒಂದಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಯನ್ನು ಈ ವರ್ಷದಲ್ಲಿಯೇ ಕಾರ್ಯಗತಗೊಳಿಸಲು ಅಲೋಚಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಮಂಜುನಾಥ ರೈ,ನಿರ್ದೇಶಕರಾದ ಸ್ವಪ್ನರಾಜ್, ಗಜೇಂದ್ರ ಪ್ರಭು, ರಾಜೇಶ್‌ ಬಿ. ದಿವಾಕರ ದಾಸ್, ವಿಜಯಕುಮಾರಿ ಸಂದ್ರ, ಸುಧಾಕರ ಸಾಲ್ಯಾನ್, ಮೈಕಲ್ ಡಿಕೋಸ್ತಾ, ಬಿ. ರವೀಂದ್ರ, ಹೇಮಂತ್ ಕುಮಾರ್ ಜೈನ್, ನಾರಾಯಣ ಸಿ, ಪರ್ನೆ, ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾದ ಅಜಿತ್ ಕುಮಾರ್ ಉಪಸ್ಥಿತರಿದ್ದರು. 

Leave a Comment