Coastal Bulletin

ಬಂಟ್ವಾಳ: ಬಿಜೆಪಿ ಸ್ಥಾಪನಾ ದಿನಾಚರಣೆ ಪ್ರಯುಕ್ತ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ದೇವಪ್ಪ ಪೂಜಾರಿ ಹಾಗೂ ಶಾಸಕರಾದ ರಾಜೇಶ್ ನಾಯ್ಕ್ ರವರ ನೇತೃತ್ವದಲ್ಲಿ ಬಿ. ಸಿ. ರೋಡಿನಲ್ಲಿ ಕಾರ್ಯಕರ್ತರ ಶೋಭಾಯಾತ್ರೆ ನಡೆಯಿತು.

ಬಿ.ಸಿ.ರೋಡಿನ ಕೈಕಂಬ ದ್ವಾರದಿಂದ ಹೊರಟು ಶೋಭಾಯಾತ್ರೆ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಸಂಪನ್ನಗೊಂಡಿತು‌. ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ವೀಕ್ಷಿಸಲಾಯಿತು.

ಬಳಿಕ‌ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಅವರು 1980 ರಲ್ಲಿ ಸದಥಾಪನೆಯಾದ ಪಕ್ಷವು ಅನೇಕ ಹಿರಿಯರ ಪರಿಶ್ರಮದಿಂದ ಈಗ ಅಧಿಕಾರಸ್ಥಾನದಲ್ಲಿದೆ. ಹಿರೊಯರ ಶ್ರಮವನ್ನು ಅವಲೋಕನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷವನ್ನು ಇನ್ನಷ್ಟು ಸಂಘಟನಾತ್ಮಕವಾಗಿಸಲು

ಅದ್ಯತೆ ನೀಡಬೇಕು ಎಂದರು.

ಕೆಯುಡಬ್ಲುಎಸ್ ಸದಸ್ಯೆ ಸುಲೋಚನ ಜಿ.ಕೆ.ಭಟ್ , ಎಸ್ಸಿ ಮೋರ್ಛಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು, ಪ್ರಮುಖರಾದ ತುಂಗಪ್ಪ ಬಂಗೇರ, ಮೋನಪ್ಪ ದೇವಸ್ಯ,ಸುದರ್ಶನ್ ಬಜ,ಪ್ರಕಾಶ್ ಅಂಚನ್, ಪುರುಷೋತ್ತಮ ಸಾಲಿಯಾನ್ ,ರಮಾನಾಥ ರಾಯಿ,ರೋನಾಲ್ಡ್ ಡಿಸೋಜ ಅಮ್ಟಾಡಿ, ಜನಾರ್ಧನ ಬೊಂಡಾಲ, ಯಶೋಧರ ಕರ್ಬೆಟ್ಟು, ಪುಪ್ಪರಾಜ್ ಶೆಟ್ಟಿ ,ರಾಧಾಕೃಷ್ಣ ತಂತ್ರಿ, ಕಮಾಲಾಕ್ಷಿ ಪೂಜಾರಿ,ಸೀಮಾ ಮಾಧವ, ಹರ್ಷಿಣಿ ಸಹಿತ ಮಂಡಲದ ಪದಾಧಿಕಾರಿಗಳು ಪ್ರಮುಖರು, ಪುರಸಭೆ ಹಾಗೂ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು. ಮಂಡಲದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು ಸ್ವಾಗತಿಸಿದರು.ಪ್ರ.ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು. 

Leave a Comment