Coastal Bulletin

ಬೆಂಗಳೂರು :  ಬಿಎಂಟಿಸಿ ಬಸ್‌ನಲ್ಲಿ ಕಾಗದ ರಹಿತ ಮತ್ತು ಕ್ಯಾಶ್‌ ಲೆಸ್‌ ವಹಿವಾಟು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ‘ಡಿಜಿಟಲ್‌ ಪಾಸ್‌’ ಅನ್ನು ಪರಿಚಯಿಸಿದೆ.

ಪ್ರಯಾಣಿಕರು ಬಸ್‌ ಪಾಸ್‌ ಪಡೆಯಲು ಬಿಎಂಟಿಸಿ ಕಚೇರಿಗಳಿಗೆ ಹೋಗಬೇಕಿಲ್ಲ. ಬಿಎಂಟಿಸಿ ಪರಿಚಯಿಸಿರುವ ಟುಮೊಕ್‌ ಮೊಬೈಲ್‌ ಆ್ಯಪ್‌ನಲ್ಲಿ ಪಾಸ್‌ ಖರೀದಿಸಬಹುದಾಗಿದೆ.

ಪ್ರಯಾಣಿಕರು ನೇರವಾಗಿ ಟುಮೊಕ್‌ ಮೊಬೈಲ್‌ ಆ್ಯಪ್‌ ಮೂಲಕ ಹಣ ಪಾವತಿಸಿ ದಿನ, ವಾರ ಹಾಗೂ ತಿಂಗಳ ಪಾಸ್‌ ಖರೀದಿಸಬಹುದಾಗಿದೆ ಎಂದು ತಿಳಿಸಿದರು.

ಪ್ಲೇ ಸ್ಟೋರ್‌ನಲ್ಲಿ ಟುಮೊಕ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಮೊಬೈಲ್‌ ಸಂಖ್ಯೆ ಹಾಗೂ ಹೆಸರು, ವಯಸು ಸೇರಿದಂತೆ ಕನಿಷ್ಠ

ವಿವರ ನಮೂದಿಸಬೇಕು. ಯಾವುದಾರೂ ಸರ್ಕಾರಿ ಗುರುತಿನ ಸಂಖ್ಯೆ ನಮೂದಿಸಬೇಕು. ಇತ್ತಿಚಿನ ಫೋಟೋ ಅಪ್‌ಲೋಡ್‌ ಮಾಡಬೇಕು. ಬಳಿಕ ಪಾಸ್‌ ಮೊತ್ತವನ್ನು ಫೋನ್‌ ಪೇ, ಗೂಗಲ್‌ ಪೇ, ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಿ ಪಾಸ್‌ ಪಡೆಯಬಹುದು. ಪ್ರತಿ ನಿರ್ವಾಹಕರಿಗೆ ಒಂದು ಕ್ಯೂಆರ್‌ ಕೋಡ್‌ ನೀಡಲಾಗಿರುತ್ತದೆ. ಡಿಜಿಟಲ್‌ ಪಾಸ್‌ ಹೊಂದಿರುವ ಪ್ರಯಾಣಿಕರು ಆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸಬಹುದಾಗಿದೆ.

Leave a Comment