ಬಂಟ್ವಾಳ :ಬಾಲ್ಯದಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಅಸಕ್ತಿ ಹೊಂದಿ ಕಬಡ್ಡಿ, ಕ್ರಿಕೆಟ್ ಖೋ ಖೋ, ವಾಲಿಬಾಲ್, ಹೈ ಜಂಪ್, ಲಾಂಗ್ ಜಂಪ್, ಮುಂತಾದ ಅಥ್ಲೆಟಿಕ್ಸ್ ಗಳಲ್ಲಿ ಉತ್ತಮ ಸಾಧನೆಗೈದ ರಾಜ್ಯ ಮಟ್ಟದ ಕುಸ್ತಿ ಪಟು ಚಂದ್ರಹಾಸ ಕಡೆಗೋಳಿ ಅವರು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ)ಪುಂಜಾಲಕಟ್ಟೆ ಇವರು ಕೊಡಮಾಡುವ ಪ್ರತಿಷ್ಠಿತ "ಸ್ವಸ್ತಿಕ್ ಸಂಭ್ರಮ" ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಚಂದ್ರಹಾಸ ಕಡೆಗೋಳಿ ಸಾಧನೆಯ ಹಾದಿ :
ಬಂಟ್ವಾಳ ತಾಲೂಕು ತುಂಬೆ ಗ್ರಾಮದ ನಿವಾಸಿಗಳಾದ ದಿ.ಉಗ್ರಪ್ಪ ಪೂಜಾರಿ ಹಾಗೂ ದಿ.ಸೀತಮ್ಮ ದಂಪತಿಗಳ ಒಂಬತ್ತು ಮಕ್ಕಳ ಪೈಕಿ 7 ನೇ ಮಗನಾಗಿ ತಾ 10.12.1975 ರಲ್ಲಿ ಜನಿಸಿ ತುಂಬೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿ ಮಂಗಳೂರಿನ ಗಣಪತಿ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದಿರುತ್ತಾರೆ.
ಬಾಲ್ಯದಲ್ಲೇ ಕ್ರೀಡಾ ಚಟುವಟಿಕೆಗಳಲ್ಲಿ ಅಸಕ್ತಿ ಹೊಂದಿದ ತಾವು ಕಬಡ್ಡಿ, ಕ್ರಿಕೆಟ್ ಖೋ ಖೋ, ವಾಲಿಬಾಲ್, ಹೈ ಜಂಪ್, ಲಾಂಗ್ ಜಂಪ್, ಅಥ್ಲೆಟಿಕ್ಸ್ ನಲ್ಲಿ ತೊಡಗಿಸಿ ತಾಲೂಕು ಅಲ್ಲದೆ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸವ್ಯಸಾಚಿ ಆಟಗಾರನಾಗಿ ಪ್ರಶಸ್ತಿಗಳನ್ನು ತಮ್ಮದಾಗಿಸಿ ಕಲಿತ ಶಾಲೆಗೆ ಕೀರ್ತಿ ತಂದವರು.
ಶಾಲಾ ದಿನಗಳಲ್ಲಿ N..C.C ಯಲ್ಲಿ ಸಕ್ರೀಯರಾಗಿ A ಗ್ರೇಡ್ ಕ್ಯಾಡೆಟ್ ಆಗಿ ಮಿಂಚಿ ರುವಿರಿ. ವೀರಮಾರುತಿ ವ್ಯಾಯಾಮ ಶಾಲೆ ನಂದಗೋಕುಲ ಪುದು ಇದರ ಸದಸ್ಯನಾಗಿ ಗುರುಗಳಾದ ಹೊನ್ನಪ್ಪ ಕುಲಾಲ್ ಅವರ ಗರಡಿಯಲ್ಲಿ ಬೆಳೆದು ದೇಹ ದಾರ್ಡ್ಯ ಪಟುವಾಗಿ ತನ್ನ ಸತತ ಶ್ರಮ ಹಾಗೂ ಅಭ್ಯಾಸದಿಂದ ನಾಡಿನ ಹಲವೆಡೆ ದೇಹ ದಾರ್ಡ್ಯ ಪ್ರದರ್ಶನಗಳನ್ನು ನೀಡಿರುವಿರಿ. ಇದರ ಜೊತೆ ಜೊತೆಗೆ ತುಳುನಾಡಿನ ಮಣ್ಣಿನ ಕಲೆ ಕುಸ್ತಿ ಯನ್ನೂ ಕರಗತಗೊಳಿಸಿದ ತಾವು ಕುಸ್ತಿ ಪಟುವಾಗಿ ಜಿಲ್ಲೆಯಾದ್ಯಂತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುತ್ತಾರೆ
ಪುತ್ತೂರಿನಲ್ಲಿ ನಡೆದ ತುಳುನಾಡ ಕುಮಾರ್ ಹಾಗೂ ತುಳುನಾಡ ಕೇಸರಿ ಕುಸ್ತಿ ಸ್ಪರ್ದೆಯಲ್ಲಿ 62 ಕೆಜಿ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕೀರ್ತಿ ತಮ್ಮದು, ಪ್ರೌಢ ಶಿಕ್ಷಣ ಪಡೆಯುವ ಸಮಯದಲ್ಲೇ 52 ಕೆಜಿ, 57 ಕೆಜಿ, 60 ಕೆಜಿ ಹಾಗೂ 62 ಕೆಜಿ ವಿಭಾಗದ
ಕುಸ್ತಿ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿರುವ ತಾವು ತನ್ನ ಶಾಲೆಗೆ ಹಾಗೂ ಊರಿಗೆ ಹೆಸರು ತಂದಿರುತ್ತಾರೆ.ಕಬಡ್ಡಿಯಲ್ಲಿ ಸವ್ಯಸಾಚಿ ಆಟಗಾರನಾಗಿ ತಂಡದ ನಾಯಕನಾಗಿ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಕ್ರೀಡಾಕ್ಷೇತ್ರದಲ್ಲಿ ತನ್ನ ಸಾಧನೆಗಳನ್ನು ಸೀಮಿತ ಗೊಳಿಸದೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ತಮ್ಮ ಸಾಧನೆ ನಿಜಕ್ಕೂ ಹೆಮ್ಮೆ ತರುವಂತಹದ್ದು ನಾಟಕಗಳನ್ನು ರಚಿಸಿ, ನಟಿಸಿ ಅದಕ್ಕೆ ಜೀವ ತುಂಬಿದ ತಮ್ಮ ನಟನ ಶೈಲಿ ಮೆಚ್ಚುವಂತಹದ್ದು ನಾಟಕಗಳಿಗೆ ಸ್ವತಃ ಹಾಡುಗಳನ್ನು ಬರೆದು ಹಿನ್ನೆಲೆ ಗಾಯಕರಾಗಿಯು ದುಡಿದವರು.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಂಠ ಸಿರಿಯಲ್ಲಿ ಹೊರಬಂದಿರುವ ಹಾಡುಗಳಿಗೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ತಾವು ಸಕಲಕಲಾವಲ್ಲಭ.
ತಮ್ಮ ಸಾಧನೆಗಳನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ . ನಿರತ ಸಾಹಿತ್ಯ ಸಂಪದ ಕಡೆಗೋಳಿ ಮಾರಿಪಲ್ಲ ಇವರು " ಬಿರ್ವ ಬಿರ್ಸೆ" ಬಿರುದನ್ನು ನೀಡಿ ಗೌರವಿಸಿರುವುದಲ್ಲದೆ, ಸೇವಾಂಜಲಿ ಪ್ರತಿಸ್ತಾನ ಫರಂಗಿಪೇಟೆ, ಅಮೂಲ್ಯ ಕಲಾ ವೇದಿಕೆ ಪುದು, ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಇವರು ಲೈಫ್ ಟೈಮ್ ಆಚಿವುಮೆಂಟ್ ಅವಾರ್ಡ್ ಪಡೆದಿರುತ್ತಾರೆ.
ಸಾಮಾಜಿಕ ಕ್ಷೇತ್ರಗಳಲ್ಲಿಯೂ ತಮ್ಮ ಸೇವೆ ನಿರಂತರ, ನಾಡಿನ ಹಲವು ಸಂಘ ಸಂಸ್ತೆಗಳಲ್ಲಿ ತೊಡಗಿಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಿದ ತಾವು ಸ್ವಂತಕ್ಕಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ನುಡಿಯಂತೆ ಊರಿನ ದೀನ ದಲಿತರ ನೋವು ನಲಿವುಗಳಿಗೆ ಹಗಲು ರಾತ್ರಿಯೆನ್ನದೆ ಸದಾ ಶ್ರಮಿಸುತ್ತಿರುವ ಇವರು ಪತ್ನಿ ಸವಿತಾ ಹಾಗೂ ಮಕ್ಕಳಾದ ನಿಧಿ ಹಾಗೂ ಪ್ರಧಿ ಯವರೊಂದಿಗಿನ ನೆಮ್ಮದಿಯ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಈ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ಫಲವಾಗಿ ಅರ್ಹವಾಗಿ ಸ್ವಸ್ತಿಕ್ ಸಂಭ್ರಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.














