Coastal Bulletin

ಬಂಟ್ವಾಳ :ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ವೀರಯೋಧ ಯಾದವ ಫ್ರೆಂಡ್ಸ್ (ರಿ)ಅಮ್ಮುಂಜೆ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ 20ನೇ ವರ್ಷದ ಸವಿ ನೆನಪಿಗಾಗಿ "ವಿಂಶತಿ ಸಂಭ್ರಮ "ಸಮಾರಂಭವು ಮಾ 13 ಭಾನುವಾರ ಅಮ್ಮುಂಜೆ ಶ್ರೀ ವಿನಾಯಕ ದೇವಸ್ಥಾನದ ಬಳಿ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ ಹಾಗೂ ಗಣಹೋಮ ನಡೆದು 9ಕ್ಕೆ ಭಾರತೀಯ ಭೂಸೇನೆಯ ನಿವೃತ್ತ ಯೋಧ ಅನಿಶ್ ಆಚಾರ್ಯರವರು ಧ್ವಜಾರೋಹಣ ಮಾಡಲಿದ್ದಾರೆ.9.30ಗೆ ಸಂಘದ ಸದಸ್ಯರಿಂದ ಧ್ವಜವಂದನೆ ನಡೆಯಲಿದೆ.

ಸಂಜೆ 4ರಿಂದ 5.30ತನಕ ಶ್ರೀ ವಿನಾಯಕ ಭಜನೆ ಮಂಡಳಿಯವರಿಂದ ಹರಿನಾಮ ಸಂಕೀರ್ತನೆ ನಡೆಯಲಿದೆ. 6ರಿಂದ ಅಗಲಿದ ಭಾರತೀಯ ಸೈನಿಕರಿಗೆ "ನುಡಿನಮನ "ಹಾಗೂ "ದೀಪ ನಮನ"ಕಾರ್ಯಕ್ರಮ ನಡೆಯಲಿದೆ

ಸಂಜೆ 7ರಿಂದ "ವಿಂಶತಿ ಸಂಭ್ರಮ "ಸಮಾರಂಭವು ನಡೆಯಲಿದ್ದು, ಉಸ್ತುವಾರಿ ಸಚಿವರಾದ ವಿ ಸುನಿಲ್ ಕುಮಾರ್,

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಬಳಿಕ ಅತಿಥಿ ಕಲಾವಿದರಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನೃತ್ಯ ವೈವಿಧ್ಯ ನಡೆಯಲಿದೆ.10ಗಂಟೆಯಿಂದ ರಂಗತರಂಗ ಕಾಪು ಇದರ ಕಲಾವಿದರಿಂದ" ಅಧ್ಯಕ್ಷೆರ್ "ಎಂಬ ತುಳು ಹಾಸ್ಯ ನಾಟಕ ಪ್ರದರ್ಶನವಾಗಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಉದಯ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Comment