Coastal Bulletin

ಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್‍ಸ್ ಅಸೋಸಿಯೇಷನ್ ಇದರ ಬಂಟ್ವಾಳ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಕೆಎಸ್‌ಟಿಎ ಸಂಸ್ಥಾಪನಾ ದಿನಾಚರಣೆ ಹಾಗೂ ಅಶಕ್ತರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಸೋಮವಾರ ನಡೆಯಿತು

ಬಜಾರ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರ ಡಾ. ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಸಂಘಟನೆ ಬಲಯುತವಾಗಿದ್ದಾಗ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿದೆ. ಆದ್ದರಿಂದ ಸದಸ್ಯರು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. 

ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ನಾಗೇಶ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯನ್ನು ಆರ್ಥಿಕವಾಗಿ ಸಶಕ್ತಗಳಿಸುವ ನಿಟ್ಟಿನಲ್ಲಿ ನಿತ್ಯನಿಧಿಯನ್ನು ಆರಂಭಿಸುವ ಬಗ್ಗೆ ಚಿಂತಿಸಲಾಗುವುದು ಎಂದರು. ಟೈಲರ್ಸ್ ಅಸೋಸಿಯೇಷನ್ ಸೊಸೈಟಿ ಪ್ರಾರಂಭಿಸುವ ಬಗ್ಗೆಯೂ ಚಿಂತನೆ ಇದ್ದು ಈ ಬಗ್ಗೆ ಈಗಾಗಲೇ ಕೆಲವು ಸುತ್ತಿನ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು. ಸಂಘದ ಸದಸ್ಯರ ಅನುಕೂಲಕ್ಕಾಗಿ ವಿವಿಧ ಬೇಡಿಕೆಗಳ ಮನವಿಯನ್ನು ಹಲವು ಭಾರಿ ಸರಕಾರ ಹಾಗೂ ಅದರ ಪ್ರತಿನಿಧಿಗಳಿಗೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು. 

ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿ ಸಂಘದ ಸದಸ್ಯರ ಒಗ್ಗಟ್ಟಿನಿಂದಾಗಿ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಸಂಘ ಆರಂಭಿಸುವ ಸಂದರ್ಭದಲ್ಲಿ ಸಂಘಟನೆಯಿಂದ ಏನು ಲಾಭ ಎಂದು ಪ್ರಶ್ನಿಸಿದವರಿಗೆ ಸಂಘದ ಇಂದಿನ ಬೆಳವಣಿಗೆಯೇ ಉತ್ತರವಾಗಿದೆ. ಸದಸ್ಯರು ಆರ್ಥಿಕ ಸ್ಥಿತಿವಂತರಲ್ಲದಿದ್ದರೂ ಕೂಡ ಎಲ್ಲರ ಸಹಕಾರದಿಂದ ಸಂಘ ಬೆಳೆಯುತ್ತಿದೆ ಎಂದರು. ಸರಕಾರಕ್ಕೆ

ಸಾಕಷ್ಟು ಬೇಡಿಕೆಗಳ ಮನವಿ ಸಲ್ಲಿಸಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ, ಆದ್ದರಿಂದ ಸರಕಾರದ ಮುಂದೆ ಕೈಚಾಚದೆ ನಮ್ಮ ಬೇಡಿಕೆಗಳನ್ನು ನಾವೇ ಈಡೇರಿಸಿಕೊಳ್ಳುವ ಅನಿವಾರ್ಯತೆ ಇದ್ದು ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. 25 ಮಂದಿ ಅಶಕ್ತರಿಗೆ ಹೊಲಿಗೆ ಯಂತ್ರವನ್ನು ಉಚಿತವಾಗಿ ವಿತರಿಸಲಾಯಿತು. ವಿವಿಧ ವಲಯಗಳ ಪದಾಧಿಕಾರಿಗಳನ್ನು ಗುರುತಿಸಲಾಯಿತು.

ಲಯನ್ಸ್ ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಶನ್ಫತ್ ಶರೀಫ್, ಉದ್ಯಮಿ ಮಚ್ಚೇಂದ್ರ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಗೋಧರ್ ಕೆ, ರೂಪಾ ರಾಜೇಶ್ ಶೆಟ್ಟಿ ಸೀತಾಲ ಶುಭ ಹಾರೈಸಿದರು. ಅಶ್ವಿನಿ ವಸಂತ ಶೆಟ್ಟಿ, 

ಜಿಲ್ಲಾ ಕೋಶಾಧಿಕಾರಿ ಈಶ್ವರ್ ಕುಲಾಲ್, ವಲಯ ಸಮಿತಿ ಅಧ್ಯಕ್ಷರಾದ ಉಮಾ ಎಲ್. ಕುಲಾಲ್‌ಇಂದಿರಾ, ರಾಜೀವಿ, ವಸಂತ ಪೂಜಾರಿ, ಸೀತರಾಮ ಶೆಟ್ಟಿ, ವಿನಯ ಮಂಡಾಡಿ, ಎ.ಕೆ. ಬಲ್ಲಾಳ್ ಅತಿಥಿಗಳಾಗಿ ಭಾಗವಹಿಸಿದ್ದರು.

ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಯಾದೇಶ್ ತುಂಬೆ ಸ್ವಾಗತಿಸಿದರು. ಉಪಾಧ್ಯಕ್ಷ ವಸಂತ ಹಳೆಗೇಟು ವಂದಿಸಿದರು. ಪವಿತ್ರ ಪೂಜಾರಿ ರಾಯಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ತುಳಸಿ ಆರ್. ಸಹಕರಿಸಿದರು.

Leave a Comment