ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ (ರಿ) ಉಳಾಯಿಬೆಟ್ಟು ಇದರ ವತಿಯಿಂದ ಪೆರ್ಮಂಕಿ ಪ್ರೀಮಿಯರ್ ಲೀಗ್- 2022 ಕ್ರಿಕೆಟ್ ಟೂರ್ನಮೆಂಟ್ ಪಿಜಿಸಿ ಮೈದಾನದಲ್ಲಿ ಭಾನುವಾರ ನಡೆಯಿತು.
ತಾಲೂಕಿನ ಹಲವು ಕ್ರಿಕೆಟ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಹರಿಕೇಶ್ ಶೆಟ್ಟಿ ಅಧ್ಯಕ್ಷರು ಉಳಾಯಿಬೆಟ್ಟು ಗ್ರಾಮ ಪಂಚಾಯತ್, ಎನ್. ರವಿರಾಜ್ ರಾವ್, ಶ್ರೀಧರ ಪೂಜಾರಿ, ಹರೀಶ್ ಕೆ, ಪ್ರಶಾಂತ್ ಸಲ್ಡಾನ, ಗುಣಾಕರ ಸಾಲ್ಯಾನ್ ಕಮಲಾಕ್ಷ ತಲ್ಲಿಮಾರು, ಭಾಸ್ಕರ್ ಅಮೀನ್, ದಾಮೋದರ ಪೂಜಾರಿ,ಪದ್ಮನಾಭ ಜೆ.
ಪೂಜಾರಿ,ರಾಜೇಶ್ ಪಕ್ಕಲಪಾದೆ, ಸುದರ್ಶನ್ ಶೆಟ್ಟಿ, ಶ್ರೀನಾಥ್ ಸಾಲಿಯಾನ್, ರುಕ್ಮಯ ಪೂಜಾರಿ, ಸುನಿಲ್ ಕುಮಾರ್, ನಿತಿನ್ ಪೂಜಾರಿ, ಕಿರಣ್ ದೇವಾಡಿಗ, ಪದ್ಮನಾಭ ಬೆಲ್ಚಡ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಎಸ್. ಎಫ್. ಸಿ. ಪಕ್ಕಲ ಪಾದೆ ಪ್ರಥಮ ಹಾಗೂ ಶ್ರೀ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಉಳಾಯಿಬೆಟ್ಟು ತಂಡ ದ್ವಿತೀಯ ಪ್ರಶಸ್ತಿಯನ್ನು ಜಯಿಸಿತು.














