ಬಂಟ್ವಾಳ :ವಿಶ್ವಜ್ಯೋತಿ ಯುವಕ ಸಂಘ ಮತ್ತು ಮಾತೃ ಮಂಡಳಿ (ರಿ) ವಳವೂರು ತುಂಬೆ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಡಿ.6ರಂದು ಶನಿವಾರ ಬೆಳಿಗ್ಗೆ ವಳವೂರಿನಲ್ಲಿ ನಡೆಯಿತು.
ನೂತನ ಕಟ್ಟಡವನ್ನು ಗುರುಪ್ರಸಾದ್ ಭಂಡಾರಿ, ವಳವೂರುಗುತ್ತು ಇವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜ್ಯೋತಿಷಿ ಅನಿಲ್ ಪಂಡಿತ್, ಸಾಮಾಜಿಕ ಕಾರ್ಯಕರ್ತ ಗೋಪಾಲ ಕುಲಾಲ್ ಗೋವಿಂತೋಟ,ಸಂಘದ ಗೌರವಾಧ್ಯಕ್ಷರಾದ ವಾಸು ಪೂಜಾರಿ ವಳವೂರು, ಸಂಜೀವ ಪೂಜಾರಿ ವಳವೂರು, ಶೇಖರ್ ಪೂಜಾರಿ, ಅಧ್ಯಕ್ಷ ಪೂವಪ್ಪ
ವಳವೂರು,ಮಾತೃ ಮಾಡಲಿಯ ಅಧ್ಯಕ್ಷೆ ರಂಜಿನಿ ವಳವೂರು,ರಾಜೀವಿ ವಳವೂರು,ಸುಬ್ರಾಯ ಭಟ್, ಕೌಶಿಕ್ ಉಮನಗುಡ್ಡೆ, ನಳಿನಾಕ್ಷಿ ವಳವೂರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 5-30ರಿಂದ ಸಂಘದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ, ಬಳಿಕ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರ ಅಭಿನಯದ "ಜೈ ಭಜರಂಗ ಬಲಿ" ನಾಟಕ ಪ್ರದರ್ಶನಗೊಳ್ಳಲಿದೆ.
















