ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಆಶ್ರಯದಲ್ಲಿ ಶ್ರೀ ಶನೈಶ್ಚರ ಸೇವಾ ಸಮಿತಿಯ ವತಿಯಿಂದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ,ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಕಟೀಲು ಮೇಳದ ಯಕ್ಷಗಾನವು ಶನಿವಾರದಂದು ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಿತು.
ಸಂಜೆ 4 30ರಿಂದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ನಡೆದು ರಾತ್ರಿ 7ಗಂಟೆ ಗೆ ಸಭಾ ಕಾರ್ಯಕ್ರಮವು ನಡೆಯಿತು, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಕಲರ್ ಕಾರ್ಟನ್ಸ್ ನ ಮಾಲಕರಾದ ಕೆ ಪಿ ಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಕಲ್ಲಡ್ಕ ಶ್ರೀರಾಮ ಪದವಿ
ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ವಹಿಸಿ, "ಮನುಷ್ಯನನ್ನು ಸಂಸ್ಕಾರಯುತನನ್ನಾಗಿ ಮಾಡುವ ಕೆಲಸ ಸಂಘಟನೆಯಲ್ಲಿದೆ. ಕ್ರಿಯಾಶೀಲ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಸಹಬಾಳ್ವೆ, ಪರೋಪಕಾರಿ ಗುಣ ಹುಟ್ಟಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜನರನ್ನು ಸತ್ ಚಿಂತನೆಯ ಕಡೆಗೆ ತೊಡಗಿಸಿಕೊಳ್ಳಬೇಕು" ಎಂದು ಹೇಳಿದರು.














