ಬಂಟ್ವಾಳ :ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ (ರಿ) ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಮೂರನೇ ವರ್ಷದ ವಾರ್ಷಿಕೋತ್ಸವವು ಬಿಸಿ ರೋಡ್ ರಕ್ತೇಶ್ವರಿ ದೇವಸ್ಥಾನದಲ್ಲಿ ನ.3ರಂದು ಬುಧವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಬೆಳಿಗ್ಗೆ 8 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ಕುಂಡಡ್ಕ ವಿಟ್ಲ ಇವರಿಂದ ಕುಣಿತ ಭಜನೆಯು ಬಿಸಿ ರೋಡು ರಕ್ತೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುಪತಿ ಭಟ್ ದೀಪ ಪ್ರಜ್ವಲಿಸುವ ಮುಖೇನ ಕುಣಿತ ಭಜನೆ ಪ್ರಾರಂಭಗೊಂಡಿತ್ತು ನಂತರ ಶ್ರೀ ವಸಂತ ತಂತ್ರಿ ಪಣಿಕಲ ಹಾಗೂ ಶ್ರೀ ಲೋಕೇಶ್ ಭಟ್ ಅಲ್ಲಿಪಾದೆ, ಇವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಧನಲಕ್ಷ್ಮಿ ಪೂಜೆ. ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್. ಮತ್ತು ಪರಮಪೂಜ್ಯ ಯೋಗಿ ಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರು ದೀಪ ಪ್ರಜ್ವಲಿಸಿ ಆಶೀರ್ವಚನ ಗೈದರು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಪುರುಷೋತ್ತಮ, ಮೊಗರ್ನಾಡ್ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜನಾರ್ದನ ಭಟ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ವಿ ಹಿಂ ಪ ಬಜರಂಗದಳ ಶರಣ್ ಪಂಪ್ವೆಲ್ ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ಪುನೀತ್ ಕೆರೇಹಳ್ಳಿ, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ದೇಲ್ ಸಹಿತ ಅತಿಥಿಗಳು ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಸ್ಕಾರ ಸಂಸ್ಕೃತಿಯನ್ನ ಬೆಳೆಸುವಲ್ಲಿ ನಮ್ಮೆಲ್ಲರ ಕರ್ತವ್ಯವನ್ನು ನೆನಪಿಸಿಕೊಳ್ಳುತ್ತ ದೇಶ ಧರ್ಮ ಸಮಾಜ ವನ್ನು ರಕ್ಷಿಸುವಂತ ಕಾರ್ಯ ನಮ್ಮಿಂದಾಗಲಿ ದೈವಸ್ಥಾನ ದೇವಸ್ಥಾನ ಮಠ ಮಂದಿರ ಗುಡಿ ಗೋಪುರ ದೈವಾರಾಧನೆ ನಾಗರಾಧನೆ ಹಾಗು ಜಾತ್ರೋತ್ಸವ ಸಂದರ್ಭದಲ್ಲಿ ಅನ್ಯಮತಿಯರಿಗೆ ಅವಕಾಶ ಮಾಡಿಕೊಡದೆ ಸನಾತನ ಹಿಂದೂ ಜಾತ್ರಾ ಬಡ ವ್ಯಾಪಾರಸ್ಥರಿಗೆ ಅವಕಾಶ ಮಾಡಿ ಕೊಡಬೇಕು ಬದುಕು
ಕಟ್ಟುವಂತ ಕಾರ್ಯವನ್ನು ಸನಾತನ ಹಿಂದೂ ಧರ್ಮದ ನಾವೆಲ್ಲರೂ ನಮ್ಮವರಲ್ಲೇ ವ್ಯವಹಾರ ವ್ಯಾಪಾರ ಮಾಡುವಂಥ ನಮ್ಮವರನ್ನು ಬೆಳೆಸುವಂಥ ಕಾರ್ಯವನ್ನು ಅವರಿಗೆ ಬದುಕು ಕಟ್ಟುವಂತ ಕೆಲಸವನ್ನು ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ನಾಟಕ ಕಲಾವಿದ ತುಳು ಸಿನಿಮಾಗಳಲ್ಲಿ ನಿರ್ದೇಶನ ಮಾಡಿದ ಕಲಾವಿದ ಹವ್ಯಾಸಿ ಪತ್ರಕರ್ತ ನ್ಯೂ ಸಂಧ್ಯಾ ಸ್ಟುಡಿಯೋ ಇದರ ಮಾಲೀಕರಾದ ಬಿ ಆರ್ ಕಬಕ ಇವರನ್ನು ಇವರ ಸಾಧನೆಗೆ ಸನ್ಮಾನಿಸಲಾಯಿತು ಮತ್ತು ಶ್ರೀ ದುರ್ಗಾ ಫ್ರೆಂಡ್ಸ್ ಕರೆಂಕೀ ಈ ಒಂದು ಸಂಘ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಧಾರ್ಮಿಕವಾಗಿ ಆರ್ಥಿಕವಾಗಿ ಕಾರ್ಯ ಗುರುತಿಸಿ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ವತಿಯಿಂದ ಅಧ್ಯಕ್ಷರನ್ನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು,.ಅನಾರೋಗ್ಯದ ನಿಮಿತ್ತ ಕಿಶೋರ್ ರಾವ್ ಮೂಡಬಿದ್ರೆ ಇವರಿಗೆ ಸಂಘದ ವತಿಯಿಂದ ಧನ ಸಹಾಯ ನಿಡಲಾಯಿತು..
ಅತಿಥಿಗಳಾಗಿ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಮತ್ತು ಸಂಘಟನಾ ಪ್ರಭಾರಿ ದಿನೇಶ್ ಆಮ್ಟೂರು. ಬಿಜೆಪಿಯ ಮುಖಂಡರು ಅಗ್ರಜ ಬಿಲ್ಡರ್ಸ್ ಉದ್ಯಮಿಗಳು ಸಂದೇಶ ಶೆಟ್ಟಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ನಾಗೇಂದ್ರ ಕುಮಾರ್ ಬಂಟ್ವಾಳ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾಧವ ಮಾವೇ ಬಜರಂಗದಳದ ಮಂಗಳೂರು ಜಿಲ್ಲಾ ಪ್ರಮುಖರಾದ ಪುನೀತ್ ಅತ್ತಾವರ. ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಸೌಮ್ಯ ಮಾತಾಜೀ ಹಿಂದೂ ಮುಖಂಡೇ ಸೌಮ್ಯ ಬೆಂಜನಪದವು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ ಬಂಟ್ವಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಬಂಟ್ವಾಳ ರೈತ ಮೋರ್ಚ ಉಪಾಧ್ಯಕ್ಷರು ಬೈದರಡ್ಕ ಪ್ರಭಾಕರ ಶೆಟ್ಟಿ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಜಯರಾಮ ಶೆಟ್ಟಿಗಾರ್ ಗೌರವಾಧ್ಯಕ್ಷರಾದ ರವೀಂದ್ರ ದಾಸ್ ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಾಣೇಶ್ ರಾವ್ ಮಂಗಳೂರು ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಗೌರವ ಸಲಹೆಗಾರ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿ ದಿನೇಶ್ ಆಮ್ಟೂರು ಸ್ವಾಗತಿಸಿದರು
ಸಂಘದ ಅಧ್ಯಕ್ಷರಾದ ಜಯರಾಮ್ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ ,ಉದಯ ಕೆಲಿಂಜ ನಿರೂಪಿಸಿದರು.