ಫರಂಗಿಪೇಟೆ : ಕ್ಷಯ ರೋಗಿಗಳಿಗೆ ದವಸಧಾನ್ಯಗಳ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ. ಸೇವಾಂಜಲಿಯ ನಿಸ್ವಾರ್ಥ ಸೇವೆ ಶ್ಲಾಘನೀಯ : ಡಿವೈಎಸ್ಪಿ ವಿಜಯ ಪ್ರಸಾದ್ ಕಳೆದ 26 ತಿಂಗಳಿನಿಂದ ಕ್ಷಯ ರೋಗಿಗಳಿಗೆ ಕಿಟ್ ವಿತರಣೆ:ಕೃಷ್ಣ ಕುಮಾರ್ ಪೂಂಜ

Coastal Bulletin
ಫರಂಗಿಪೇಟೆ : ಕ್ಷಯ ರೋಗಿಗಳಿಗೆ ದವಸಧಾನ್ಯಗಳ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ. ಸೇವಾಂಜಲಿಯ ನಿಸ್ವಾರ್ಥ ಸೇವೆ ಶ್ಲಾಘನೀಯ : ಡಿವೈಎಸ್ಪಿ ವಿಜಯ ಪ್ರಸಾದ್ ಕಳೆದ 26 ತಿಂಗಳಿನಿಂದ ಕ್ಷಯ ರೋಗಿಗಳಿಗೆ ಕಿಟ್ ವಿತರಣೆ:ಕೃಷ್ಣ ಕುಮಾರ್ ಪೂಂಜ

ಬಂಟ್ವಾಳ: ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ತನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸಮಾಜದ ಜನರ ನಿಸ್ವಾರ್ಥ ಸೇವಾ ಮಾಡುತ್ತಿರುವ ಕೃಷ್ಣ ಕುಮಾರ್ ಪೂಂಜ ಅವರ ಸೇವಾ ಕಾರ್ಯ ಅನುಕರಣೀಯ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯರೋಗಿಗಳಿಗೆ ದವಸಧಾನ್ಯಗಳ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಉತ್ತಮವಾದ ಕೆಲಸವನ್ನು ಪೂಂಜರು ಮಾಡುತ್ತಿದ್ದಾರೆ. ಕ್ಷಯರೋಗಿಗಳನ್ನು ಗುರುತಿಸಿ ಅವರಿಗೆ ಪೌಷ್ಠಿಕ ಆಹಾರವನ್ನು ಪ್ರತೀ ತಿಂಗಳು ನೀಡುವ ಮೂಲಕ ಅವರ ಸೇವೆ ಮಾಡುತ್ತಿದ್ದಾರೆ. ಇದನ್ನು ರೋಗಿಗಳು ಸದ್ಬಳಕೆ ಮಾಡಿಕೊಂಡು ರೋಗ ಗುಣಮುಖರಾಗುವುದೇ ಅವರಿಗೆ ಕೊಡುವ ಪ್ರತಿಫಲವಾಗಿದೆ ಎಂದು ತಿಳಿಸಿದರು. ಕ್ಷಯ ರೋಗಿಗಳು ಎನ್ನುವ ಕೀಳರಿಮೆ, ಹಿಂಜರಿಕೆ ಬಿಟ್ಟು ರೋಗ ನಿರ್ಮೂಲನೆಗೆ ಸಹಕರಿಸ ಬೇಕು. ನಮ್ಮ ಆಸುಪಾಸಿನಲ್ಲಿ ಬೇರೆ ಯಾರಾದರೂ ರೋಗಿಗಳಿದ್ದರೆ ಅವರಿಗೂ ಚಿಕಿತ್ಸೆಗೆ ನೆರವಾಗಬೇಕು ಎಂದರು. ಬಂಟ್ವಾಳ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಬಿ.ಪ್ರಕಾಶ್ ಬಾಳಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸೇವಾಂಜಲಿ ಸಂಸ್ಥೆ ಮಿನಿ ಆಸ್ಪತ್ರೆಯಂತೆ ಕೆಲಸ ನಿರ್ವಹಿಸುತ್ತಿದ್ದು ರೋಟರಿ ಕ್ಲಬ್ ಬಂಟ್ವಾಳ ಹಾಗೂ ಸೇವಾಂಜಲಿ

ಸಂಸ್ಥೆ ಸೇವಾ ಕಾರ್ಯದಲ್ಲಿ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದೆ ಎಂದು ತಿಳಿಸಿದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಕಳೆದ 26 ತಿಂಗಳಿನಿಂದ ಪ್ರತೀ ತಿಂಗಳು ನಿರಂತರವಾಗಿ ಕ್ಷಯ ರೋಗಿಗಳಿಗೆ ದಾನಿಗಳ ಸಹಕಾರದಿಂದ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಈವರೆಗೆ ಒಟ್ಟು 136 ಕ್ಷಯ ರೋಗಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಸರಿಯಾದ ಔಷಧ ಹಾಗೂ ಪೌಷ್ಟಿಕಾಹಾರ ಸೇವಿಸುವ ಮೂಲಕ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು. ಸೇವಾಂಜಲಿ ಟ್ರಸ್ಟಿ ಪದ್ಮನಾಭ ಶೆಟ್ಟಿ ಪುಂಚಮೆ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಉಪಸ್ಥಿತರಿದ್ದರು.

ಪ್ರಮುಖರಾದ ಕೃಷ್ಣ ತುಪ್ಪೆಕಲ್ಲು, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಸುರೇಶ್ ರೈ ಪೆಲಪಾಡಿ,ಭಾಸ್ಕರ ಚೌಟ, ಆರ್ ಎಸ್.ಜಯ, ದಿನೇಶ್ ತುಂಬೆ, ಸುಕುಮಾರ್ ಅರ್ಕುಳ, ಆನಂದ ಆಳ್ವ ಗರೋಡಿ, ನಾರಾಯಣ ಬಡ್ಡೂರು, ಮೋಹನ್ ಬೆಂಜನಪದವು, ಪದ್ಮನಾಭ ಕಿದೆಬೆಟ್ಟು ಉಪಸ್ಥಿತರಿದ್ದರು.

Leave a Comment