ಬಂಟ್ವಾಳ :ಯುವ ವೇದಿಕೆಯ ಆಶ್ರಯದಲ್ಲಿ ಬಿ.ಲಿಂಗಪ್ಪ ಮಾಸ್ಟರ್‌ರಿಗೆ ಗುರುನಮನ

Coastal Bulletin
ಬಂಟ್ವಾಳ :ಯುವ ವೇದಿಕೆಯ ಆಶ್ರಯದಲ್ಲಿ ಬಿ.ಲಿಂಗಪ್ಪ ಮಾಸ್ಟರ್‌ರಿಗೆ ಗುರುನಮನ

ಬಂಟ್ವಾಳ :ಕುಲಾಲ ಕುಂಬಾರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಯುವ ವೇದಿಕೆಯ ಸ್ಥಾಪಕ ಸದಸ್ಯರು, ಬಂಟ್ವಾಳ ತಾಲೂಕು ಕುಲಾಲ ಸಂಘದ ಮಾಜಿ ಅಧ್ಯಕ್ಷರು, ನಿವೃತ್ತ ಶಿಕ್ಷಕರಾದ ಶ್ರೀ ಬಿ.ಲಿಂಗಪ್ಪ ಮಾಸ್ಟರ್ ರವರಿಗೆ ಅವರ ಸ್ವಗೃಹದಲ್ಲಿ ಅವರ ಪತ್ನಿ ಶ್ರೀಮತಿ ಸುಶೀಲಾ ಟೀಚರ್ ಮತ್ತು ಪುತ್ರ ಸೃಜನ್‌ರವರ ಉಪಸ್ಥಿತಿಯಲ್ಲಿ ಗುರುವಂದನೆಯ ಮೂಲಕ ಸಂಮಾನಿಸಲಾಯಿತು.

ಈ ಸಂದರ್ಭದಲ್ಲಿ. ಯುವ ವೇದಿಕೆಯ ಸ್ಥಾಪಕಧ್ಯಕ್ಷರಾದ ಆನಂದ ಮಿತ್ತಪರಾರಿ, ಅಧ್ಯಕ್ಷರಾದ ಸುಮೀತ್ ಸೊರ್ನಾಡು, ಗೌರವಾಧ್ಯಕ್ಷ ಎಚ್ಕೆ ನಯನಾಡು, ವಿಭಾಗಿಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು, ಮಹಿಳಾ

ಸಂಚಾಲಕಿ ಶ್ರೀಮತಿ ದುರ್ಗಾ ಪ್ರದೀಪ್, ರಾಮಚಂದ್ರ ದೈಪಲ,ಸೌಮ್ಯ ಸುಕುಮಾರ್, ಮೀನಾಕ್ಷಿ ತುಂಬೆ, ಕು!ಸಾಧ್ವಿ ಸುಕುಮಾರ್, ಕೌಶಿಕ್ ರಾಮಚಂದ್ರ ಉಪಸ್ಥಿತರಿದ್ದರು. ಸುಕುಮಾರ್ ಬಂಟ್ವಾಳ ಸಂಧರ್ಭೊಚಿತವಾಗಿ ಮಾತನಾಡಿದರು, ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.

Leave a Comment