ಕುಮ್ಡೇಲು: ನೂತನ ಶಿಲಾಮಯ ಕೋರ್ದಬ್ಬು ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ.

Coastal Bulletin
ಕುಮ್ಡೇಲು: ನೂತನ ಶಿಲಾಮಯ ಕೋರ್ದಬ್ಬು ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ.

ಬಂಟ್ವಾಳ : ಪುದು ಗ್ರಾಮದ ಕುಮ್ಡೇಲು ಶ್ರೀ ಕೋರ್ದಬ್ಬು ದೈವಸ್ಥಾನ, ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಿಲಾಮಯ ಕೋರ್ದಬ್ಬು ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವು ವೆl ಮೂl ಪೊಳಲಿ ಸುಬ್ರಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಸೆ. 6ರಂದು ಗುರುವಾರ ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮನಾಥ ರೈ ಯವರು ಭಾಗವಹಿಸಿ ಮಾತನಾಡಿ, ಅವಿಭಜಿತ ದ.ಕ.ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಬೇರೆ ಯಾವ ಜಿಲ್ಲೆಯಲ್ಲಿಯೂ ನಡೆಯಲು ಸಾಧ್ಯವಿಲ್ಲ. ಇಲ್ಲಿನ‌ ನೆಲದ‌ ಸಂಸ್ಕೃತಿಯೇ ವಿಶಿಷ್ಟವಾದುದು ಎಂದರು.

ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ,ಮಾನವರಲ್ಲಿಯೂ ದೇವರನ್ನು ಕಲ್ಲಿನಲ್ಲೂ ದೇವರನ್ನು ಕಂಡ ಕೃಷಿ ಆರಾಧನೆಯ ಜಿಲ್ಲೆ ನಮ್ಮದಾಗಿದ್ದು, ದೈವಗಳ ಶಕ್ತಿಯನ್ನುಇಡೀ ನಾಡಿಗೆ ಪರಿಚಯಿಸಿದ ಕೀರ್ತಿ ನಮ್ಮ ತುಳುನಾಡಿನದ್ದು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ

ಡಾ.ಸಂಜೀವ ದಂಡಕೇರಿ, ನೆತ್ತರಕೆರೆಗುತ್ತು ನಾರಾಯಣ ಹೊಳ್ಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಾಲಕೃಷ್ಣ, ಪ್ರಮುಖರಾದ ಶಿವಪ್ಪ ನಂತೂರು, ಉದ್ಯಮಿಗಳಾದ ರಾಜಶೇಖರ ಚೌಟ, ಕೆಪಿ ಶೆಟ್ಟಿ , ಭುವನೇಶ್ ಪಚ್ಚಿನಡ್ಕ, ಸೇವಾಂಜಲಿ ಟ್ರಸ್ಟ್ ನ ಕೆ.ಕೃಷ್ಣಕುಮಾರ್ ಪೂಂಜಾ, ತುಂಬೆಗುತ್ತು ಚಂದ್ರಪ್ರಕಾಶ್ ಶೆಟ್ಟಿ, ನಿರ್ಮಾಣ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು, ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ,ಪ್ರ. ಕಾರ್ಯದರ್ಶಿ ಭರತ್ ಕುಮ್ಡೇಲು, ಮೊದಲಾದವರು ಉಪಸ್ಥಿತರಿದ್ದರು.

ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿದರು. ಹರಿಕೃಷ್ಣ ಕೆ.ಪಂಡಿತ್ ವಂದಿಸಿ ರಾಜೇಶ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment