ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ 6ರಿಂದ 10ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಸಂಜೆ ಕೊಯಿಲ ಮತ್ತು ಸಿದ್ಧಕಟ್ಟೆಯಿಂದ ಏಕಕಾಲದಲ್ಲಿ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕೊಯಿಲ ಮಾವಂತೂರು ಶ್ರೀ ಮಹಾಗನಪತಿ ದೇವಸ್ಥಾನದಲ್ಲಿ ಕಟೀಲು ಕ್ಷೇತ್ರದ ಕಮಲಪ್ರಸಾದ ಅಸ್ರಣ್ಣ ಮತ್ತು ಸಿದ್ಧಕಟ್ಟೆಯಲ್ಲಿ ಪೂಂಜ ಕ್ಷೇತ್ರದ ಕೃಷ್ಣಪ್ರಸಾದ ಅಸ್ರಣ್ಣ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ವೇಳೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಶುಭ ಹಾರೈಸಿದರು.
ಬ್ರಹ್ಮಕಲಶೇತ್ಸವ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಗೌರವಾಧ್ಯಕ್ಷ ರವಿಶಂಕರ ಶೆಟ್ಟಿ ಬಡಾಜೆಗುತ್ತು, ರಾಜಾ ಎಸ್.ಹೊಳ್ಳ ಪತ್ತುಮುಡಿ, ಕಾರ್ಯಾಧ್ಯಕ್ಯ ಸಂತೋಷ್ ಕುಮಾರ್ ಚೌಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಹೊರೆಕಾಣಿಕೆ ಸಮಿತಿ ಸಂಚಾಲಕ ರಶ್ಮಿತ್ ಶೆಟ್ಟಿ ಕೈತ್ರೋಡಿ , ಅನುವಂಶಿಕ ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಶ, ಪ್ರಮುಖರಾದ ಎಂ.ಪದ್ಮರಾಜ ಬಲ್ಲಾಳ್, ಅಗ್ಗೊಂಡೆ ಜಗಧೀಶ ಆಳ್ವ, ಡೊಂಬಯ ಬಿ.ಅರಳ,
ರಾಜೇಶ ಗೋವಿಂದಬೆಟ್ಟು, ಶರತ್ ಕುಮಾರ್ ಕೊಯಿಲ, ರಾಮಚಂದ್ರ ಶೆಟ್ಟಿಗಾರ್, ಯಶೋಧರ ರೈ ದೇರಾಜೆ, ಸದಾನಂದ ಗೌಡ ಮತ್ತಾವು, ದುರ್ಗಾದಾಸ್ ಶೆಟ್ಟಿ ಮಾವಂತೂರು, ವಸಂತ ಕುಮಾರ್ ಅನ್ನಳಿಕೆ, ದೇವಪ್ಪ ಕುಲಾಲ್, ಪ್ರಭಾಕರ ಪ್ರಭು, ಶೇಖರ ಅಂಚನ್, ಮೋಹನ್ ಕೆ.ಶ್ರೀಯಾನ್ ರಾಯಿ, ಸತೀಶ ಪೂಜಾರಿ ಅಳಕೆ, ರತ್ನಕುಮಾರ್ ಚೌಟ, ದಿನೇಶ ಸುವರ್ಣ, ಹೇಮಚಂದ್ರ ಗೌಡ ಸಿದ್ಧಕಟ್ಟೆ, ಪರಮೇಶ್ವರ ಪೂಜಾರಿ, ಉಮೇಶ ಅರಳ, ಆನಂದ ಸಪಲ್ಯ, ಸಂತೋಷ್ ಕುಮಾರ್ ಬೆಟ್ಟು, ಗಣೇಶ ಶೆಟ್ಟಿ ಆರಂಬೋಡಿ, ಹರೀಶ ಆಚಾರ್ಯ, ದೇವಪ್ಪ ಕರ್ಕೇರ, ಆನಂದ ಬುರಾಲ್, ರಕ್ಷಿತ್ ಅಂತರ, ಯೋಗೀಶ್ ಎಲ್ಷೇಲು ಮತ್ತಿತರರು ಇದ್ದರು.
ಚಿಲಿಪಿಲಿ ಗೊಂಬೆ ಕುಣಿತ ಸಹಿತ ಬ್ಯಾಂಡು, ವಾದ್ಯ, ಕೊಂಬು, ಚೆಂಡೆ, ಕಲಶ ಹೊತ್ತ ನಾರಿಯರು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.














