Coastal Bulletin

ಬಂಟ್ವಾಳ :ಉದಯ ಯುವಕ ಮಂಡಲ ಅಬ್ಬೆಟ್ಟು ಇದರ 41ನೇ ವಾರ್ಷಿಕೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅಂಬಿಕಾ ಅನ್ನಪೂರ್ಣೇಶ್ವರಿ ದೇವಿಗೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಅಪ್ಪೆ ಮಂತ್ರದೇವತೆ ಎಂಬ ತುಳು

ಯಕ್ಷಗಾನ ಬಯಲಾಟ ನೆರವೇರಿತು. 

ಅಬ್ಬೆಟ್ಟು ಉದಯ ಯುವಕ ಮಂಡಲದಲ್ಲಿ 41 ವರ್ಷಗಳಿಂದಲೂ ನಿರಂತರವಾಗಿ ತುಳು ಯಕ್ಷಗಾನ ಪ್ರಸಂಗಗಳೇ ಪ್ರದರ್ಶನ ಆಗುತ್ತಿರುವುದು ವಿಶೇಷ.

Leave a Comment