ಮಂಗಳೂರು :ಅಶೋಕ್ ಎಂ ಸಾಲ್ಯಾನ್ ಹಾಗೂ ಬೃಜೇಶ್ ಬೇರಿಂಜ ಆಡಳಿತ ನಿರ್ದೇಶನದ ಇನ್ ಜೋನ್ ಸರ್ವಿಸಸ್ ಇಂಡಿಯಾ ಪ್ರೈ ಲಿ ಎಂಬ ಸಂಸ್ಥೆಯು ಜ.6ರಂದು ಶುಕ್ರವಾರ ಮಂಗಳೂರಿನ ಓಷಿಯನ್ ಪರ್ಲ್ ನಲ್ಲಿ ಶುಭಾರಂಭಗೊಂಡಿತು.
ಸಂಸ್ಥೆಯ ಲೋಗೋ ಅನಾವರಣಗೊಳಿಸಿದ ಕ್ರೆಡೈ ಮಂಗಳೂರು ಇದರ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಮಾತನಾಡಿ , ಇನ್ಜೋನ್ ಸರ್ವಿಸ್ ಸಂಸ್ಥೆಯ ಪೂರ್ವ ತಯಾರಿ ನಿಜಕ್ಕೂ ವಿಶೇಷ, ರಾಜ್ಯವಿಡೀ ಸಂಚರಿಸಿ ಎಲ್ಲಾ ಕಂಪನಿಗಳ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಆ ಮೂಲಕ ಸಮಸ್ಯೆಗಳನ್ನು ಪರಿಹರಿಸ ಹೊರಟಿರುವ ಸಂಸ್ಥೆಯು ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ಬೆಳಗಿ ಸಾಮಾನ್ಯ ಜನರಿಂದ ಹಿಡಿದು ಪ್ರತಿಯೊಬ್ಬರಿಗೂ ನಿಮ್ಮ ಸೇವೆ ಲಭಿಸಲಿ ಎಂದು ಶುಭ ಹಾರೈಸಿದರು.
ಮಂಗಳೂರಿನ ಖ್ಯಾತ ವಕೀಲರಾದ ದಯಾನಂದ ರೈ ಶುಭ ಹಾರೈಸಿ, ನೇರದೃಷ್ಟಿಕೋಣದ , ಉತ್ತಮ ಆಡಳಿತ ವ್ಯವಸ್ಥೆ ನಿಮ್ಮದಾಗಲಿ ಎಂದರು. ಮತ್ತೋರ್ವ ಮುಖ್ಯ ಅತಿಥಿಗಳು ಮ್ಯಾಕ್ ಗ್ರೂಪ್ ಇದರ ಮೇನೇಜಿಂಗ್ ಡೈರೆಕ್ಟರ್ ಅಬ್ದುಲ್ ಮುನೀರ್ ಶುಭ ಹಾರೈಸಿದರು.
ಗೋಕರ್ಣನಾಥೇಶ್ವರ ಬ್ಯಾಂಕ್
ಅಧ್ಯಕ್ಷರು ಎಂ ರಾಮಚಂದ್ರ ಮಾತನಾಡಿ, ಇಂದಿನ ದಿನಗಳಲ್ಲಿ ಸರ್ವಿಸ್ ಕೊಡುವ ನಿಟ್ಟಿನಲ್ಲಿ ಕಾರ್ಮಿಕರ ಹಣವನ್ನು ದೋಚಿ, ಅವರುಗಳ ಹಣದಲ್ಲಿ ಆಡವಾಡುತ್ತಿದೆ, ಆದುದರಿಂದ ನಿಮ್ಮಿಂದ ಇಂತಹ ವ್ಯವಸ್ಥೆಗಳಿಗೆ ಕಡಿವಾಣ ಹಾಕಿ ಆ ಮೂಲಕ ನೇರ ಸರ್ವಿಸ್ ನೀಡಬೇಕೆಂದು ಆಶಯಿಸಿ ನಿಮ್ಮೊಂದಿಗೆ ನಮ್ಮ ಸಹಕಾರ ಎಂದಿಗೂ ಇದೆ ಎಂದರು,
ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ , ಈ ಕಂಪನಿಯ ಇಬ್ಬರು ಡೈರೆಕ್ಟರ್ ಗಳ ಮಹತ್ತರವಾದ ಚಿಂತನೆಗಳು ನಿಮ್ಮ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ , ನಮ್ಮಿಂದ ಯಾವುದೇ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ ಎಂದರು.
ಸಂಸ್ಥೆಯ. ಅಶೋಕ್ ಎಂ ಸಾಲ್ಯಾನ್ ಸ್ವಾಗತಿಸಿ, ಬ್ರಜೇಶ್ ಬೇರಿಂಜ ಪ್ರಾಸ್ತಾವಿಕವಾಗಿ ಮಾತನಾಡಿದರು,ಕುಮಾರಿ ಮೇಘನಾ ಧನ್ಯವಾದವಿತ್ತು, ಗಣೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು














