ಬಂಟ್ವಾಳ :ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಪಟ್ಲಾಶ್ರಯ ಯೋಜನೆಯಡಿಯಲ್ಲಿ ಭವಾನಿ ಶಿಪ್ಪಿಂಗ್ ನ ಸಂಸ್ಥಾಪಕರಾದ ಗೌರವಾನ್ವಿತ ಕೆ. ಡಿ. ಶೆಟ್ಟಿಯವರ ಕೊಡುಗೆಯ ಆರನೇ(6ನೇ) ಮನೆಯನ್ನು ಅಮ್ಮುಂಜೆಯ ಚಂದ್ರಹಾಸ(ಚುನ್ನಿ) ಪೂಜಾರಿಯವರಿಗೆ ವಿದ್ಯುಕ್ತವಾಗಿ ಬಿಟ್ಟುಕೊಡಲಾಯಿತು. ಭವಾನಿ ಶಿಪ್ಪಿಂಗ್ ನ ಮಂಗಳೂರು ಶಾಖೆಯ ವ್ಯವಸ್ಥಾಪಕರಾದ ರವಿ ಶೆಟ್ಟಿಯವರು ಮನೆಯ ಕೀಯನ್ನು ಹಸ್ತಾಂತರಿಸಿದರು.
ಯಕ್ಷಧ್ರುವ ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭವಾನಿ ಶಿಪ್ಪಿಂಗಿನ ಪರವಾಗಿ ರವಿ ಶೆಟ್ಟಿಯವರನ್ನು, ಮನೆ ನಿರ್ಮಾಣದಲ್ಲಿ ಸಹಕರಿಸಿದ ಪಿ. ಡಬ್ಲ್ಯು. ಡಿ. ಗುತ್ತಿಗೆದಾರರಾದ ಅಬೂಬಕರ್ ಹಾಗೂ ಸಿವಿಲ್ ಇಂಜಿನಿಯರ್ ನಮಾಜ್ ನವಾಜ್ ರವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಪಟ್ಲ ಟ್ರಸ್ಟಿನ ಪ್ರ. ಕಾರ್ಯದರ್ಶಿ ಪುರುಷೋತ್ತಮ
ಕೆ. ಭಂಡಾರಿ, ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ , ಟ್ರಸ್ಟಿನ ಪೊಳಲಿ ಘಟಕದ ಅಧ್ಯಕ್ಷರಾದ ಉಮೇಶ್ ಭಂಡಾರಿ, ಲೋಕೇಶ್ ಭರಣಿ, ಅಮ್ಮುಂಜೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ವಾಮನ ಆಚಾರ್ಯ, ಚಿದಾನಂದ ಗುರಿಕಾರ, ಈಶ್ವರ ಪೂಜಾರಿ, ರಮೇಶ ಅಮ್ಮುಂಜೆ, ಮೋಹನ ಅಮ್ಮಂಜೆ, ವೈಶಾಖ್ ಶೆಟ್ಟಿ ಉಪಸ್ಥಿತರಿದ್ದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.














