Coastal Bulletin

ಫರಂಗಿಪೇಟೆ : ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದದ 14ನೇ ಶಾಖೆಯ ಶುಭಾರಂಭವು ಜ.9 ರಂದು ಅತ್ತಾಯಿ ಕಾಂಪ್ಲೆಕ್ಸ್ ಫರಂಗಿಪೇಟೆಯಲ್ಲಿ‌ ನಡೆಯಲಿದೆ.

ಫರಂಗಿಪೇಟೆ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಪುದು ಗ್ರಾ ಪಂ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ‌ ಇವರು ಉದ್ಘಾಟನೆ ಮಾಡಲಿದ್ದಾರೆ. ಗೋರಖ್ ಪುರ್ ಮಾಜಿ ಉಪಾಧ್ಯಕ್ಷರು ಲೋಕನಾಥ್ ಡಿ ಇವರು ಭದ್ರತಾ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರಿನ‌ ಅಧ್ಯಕ್ಷರು ಮಯೂರ್ ಉಳ್ಳಾಲ್ ಇವರು ಗಣಕಯಂತ್ರ ಉದ್ಘಾಟನೆ ಮಾಡಲಿದ್ದಾರೆ.


ಕಾರ್ಯಕ್ರಮದಲ್ಲಿ ಫರಂಗಿಪೇಟೆ

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ , ಸಾಮಾಜಿಕ ಕಾರ್ಯಕರ್ತರಾದ ಕೊಡ್ಮಾನ್ ಕಾಂತಪ್ಪ ಶೆಟ್ಟಿ, ಜಿಲ್ಲಾ ಕೋಳಿ ಸಾಕಾಣೆದಾರರ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಾದ ದಯಾನಂದ ಅಡ್ಯಾರ್,ಪುದು ಕುಲಾಲ ಸಂಘದ ಅಧ್ಯಕ್ಷರಾದ ನಾರಾಯಣ ಬಿ, ಕಟ್ಟಡ ಮಾಲಕರಾದ ಮಹಮ್ಮದ್ ಇಕ್ಬಲ್ ಜಫರುಲ್ಲಾ, ಕುಲಾಲ ಸೇವಾ ಸಂಘ ತುಂಬೆ ಅಧ್ಯಕ್ಷರು ಶಿವಕುಮಾರ್ ಹೀಗೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.ಎಂದು ಕಾರ್ಯನಿರ್ವಾಹಣಾಧಿಕಾರಿ ಜನಾರ್ದನ ಮೂಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment