ಬಂಟ್ವಾಳ :ಸೌಹಾರ್ದ ಫ್ರೆಂಡ್ಸ್ ಸರ್ಕಲ್ ಜ್ಯೋತಿಗುಡ್ಡೆ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ ಹಾಗೂ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮೈದಾನದಲ್ಲಿ ನ.02 ಶನಿವಾರದಂದು ನಡೆಯಿತು.
ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಒಟ್ಟು 33 ತಂಡಗಳು ಭಾಗವಹಿಸಿದ್ದು ಪ್ರಥಮ - ವಾಮಂಜೂರ್ ಲಯನ್ಸ್, ದ್ವಿತೀಯ - ವಿಕ್ಕಿಫ್ರೆಂಡ್ಸ್ ಮೂಲ್ಕಿ, ತೃತೀಯ- ಶ್ರೀ ದೇವಿ ಫ್ರೆಂಡ್ಸ್ ಮೂಡುಶೆಡ್ಡೆ,ಚತುರ್ಥ - ಸಿಎಂಬಿ ದೇಮುಂಡೆ ಸ್ಥಾನವನ್ನು ಪಡೆದು ನಗದು
ಹಾಗೂ ಎಸ್ ಎಫ್ ಸಿ ಟ್ರೋಫಿ ಗೆದ್ದುಕೊಂಡಿದೆ.
ಸ್ಥಳೀಯ ಆಯ್ದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದಲ್ಲಿ 10 ತಂಡಗಳು ಭಾಗವಹಿಸಿದ್ದು, ಪ್ರಥಮ : ಎಲ್ ವಿ ಎಸ್ ಎಸ್ ಜಾರಂದಗುಡ್ಡೆ, ದ್ವಿತೀಯ: ನವಜ್ಯೋತಿ ಕಾಪಿಕಾಡ್ ತಂಡವು ಎಸ್ ಎಫ್ ಸಿ ಟ್ರೋಫಿ ಗೆದ್ದುಕೊಂಡಿದೆ.















