ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ವಿದ್ಯಾಗಿರಿ. ‘ಗಾಂಧಿ ಚಿಂತನೆಗಳ ಪ್ರಸ್ತುತತೆ’ ಉಪನ್ಯಾಸ ಕಾರ್ಯಕ್ರಮ.

Coastal Bulletin
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ವಿದ್ಯಾಗಿರಿ. ‘ಗಾಂಧಿ ಚಿಂತನೆಗಳ ಪ್ರಸ್ತುತತೆ’ ಉಪನ್ಯಾಸ ಕಾರ್ಯಕ್ರಮ.

ಬಂಟ್ವಾಳ: ಗಾಂಧೀಜಿ ಸತ್ಯ, ಅಹಿಂಸೆ, ಸರಳತೆಯ ಗುಣಗಳಿಂದ ವಿಶ್ವಮಾನ್ಯರಾಗಿದ್ದಾರೆ. ತತ್ವ, ಆದರ್ಶಗಳನ್ನು ಅರಿತು, ಅಳವಡಿಸಿಕೊಂಡು ಹೋಗಬೇಕು ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಕೆ.ಎಸ್. ಹೇಳಿದರು.

ಇವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಇಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಗಾಂಧಿ ಚಿಂತನೆಗಳ ಪ್ರಸ್ತುತತೆ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್.ವಿ.ಎಸ್. ಕಾಲೇಜು ಪ್ರಾಂಶುಪಾಲ ಡಾ.ಸುಯೋಗ ವರ್ಧನ್ ಡಿ.ಎಂ. ಅಧ್ಯಕ್ಷತೆ ವಹಿಸಿ ಗಾಂಧೀಜಿಯವರ ವಿಚಾರಗಳು ಸಾರ್ವಕಾಲಿಕ. ವಿದ್ಯಾರ್ಥಿಗಳು ಗಾಂಧಿಯವರ ತತ್ವ-ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ

ವಿದ್ಯಾರ್ಥಿಕ್ಷೇಮಪಾಲನ ಅಧಿಕಾರಿ ಶಿವಣ್ಣ ಪ್ರಭು ಕೆ ಮತ್ತಿತರರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶ್ರದ್ಧಾ ಮತ್ತು ತುಳಸಿ ಗಾಂಧಿ ಚಿಂತನೆಗಳ ಕುರಿತು ಅಭಿಪ್ರಾಯ ಮಂಡಿಸಿದರು.

ಗಾಂಧಿ ಅಧ್ಯಯನ ಕೇಂದ್ರ ಅಧ್ಯಕ್ಷರು ಮತ್ತು ಕನ್ನಡ ಸಹಾಯಕ ಪ್ರಾಧ್ಯಾಪಕ ಮನೋಹರ ಶಾಂತಪ್ಪ ದೊಡ್ಡಮನಿ ಸ್ವಾಗತಿಸಿ, ವಿದ್ಯಾರ್ಥಿನಿ ನವ್ಯಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸಂಪ್ರೀತಾ ಕೆ. ವಂದಿಸಿದರು.

Leave a Comment