ಬಿ.ಸಿ.ರೋಡು: 8ರಂದು ' ಜಾಗೃತ ಹಿಂದೂ ಸಮಾಜೋತ್ಸವ ' 'ಶೌರ್ಯ ಜಾಗರಣ ರಥಯಾತ್ರೆ, ಸಾಧ್ವಿ ದೇವಿ ಸರಸ್ವತಿ ಜೀ ದಿಕ್ಸೂಚಿ ಭಾಷಣ.

Coastal Bulletin
ಬಿ.ಸಿ.ರೋಡು: 8ರಂದು ' ಜಾಗೃತ ಹಿಂದೂ ಸಮಾಜೋತ್ಸವ ' 'ಶೌರ್ಯ ಜಾಗರಣ ರಥಯಾತ್ರೆ, ಸಾಧ್ವಿ ದೇವಿ ಸರಸ್ವತಿ ಜೀ ದಿಕ್ಸೂಚಿ ಭಾಷಣ.

ಬಂಟ್ವಾಳ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಬಿ.ಸಿ.ರೋಡಿನ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಇದೇ 8 ರಂದು ಸಂಜೆ 4.30 ಗಂಟೆಗೆ ' ಜಾಗೃತ ಹಿಂದೂ ಸಮಾಜೋತ್ಸವ ' ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ, ವಕೀಲ ಪ್ರಸಾದ್ ಕುಮಾರ್ ರೈ ತಿಳಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಚಿತ್ರದುರ್ಗದಲ್ಲಿ ಚಾಲನೆಗೊಂಡು ಹೊರಟಿರುವ 'ಶೌರ್ಯ ಜಾಗರಣ ರಥಯಾತ್ರೆ' ಇದೇ 8 ರಂದು ಬಂಟ್ವಾಳಕ್ಕೆ ಆಗಮಿಸಲಿದ್ದು, ಅಂದು ಮಧ್ಯಾಹ್ನ ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ ಬಳಿಕ ಬಿ.ಸಿ.ರೋಡಿನಲ್ಲಿ ಸಂಜೆ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ ಎಂದರು.

ಅಂದು ಸುಮಾರು 50 ಸಾವಿರ ಮಂದಿ ಸೇರುವ ನಿರೀಕ್ಷೆ ಇದ್ದು, ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಬೈಠಕ್ ನಡೆಸಲಾಗಿದೆ ಎಂದರು. 

2012 ರ ಬಳಿಕ ಈ ಬಾರಿ ಬಂಟ್ವಾಳದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯುತ್ತಿದ್ದು, ಇದೇ ಪ್ರಥಮ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿರುವ ಸಾಧ್ವಿ ದೇವಿ ಸರಸ್ವತಿ ಜೀ ದಿಕ್ಸೂಚಿ

ಭಾಷಣ ಮಾಡುವರು. ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಕಣಿಯೂರು ಮಹಾಬಲ ಸ್ವಾಮೀಜಿ, ಪೊಳಲಿ ವಿವೇಕ ಚೈತ್ಯನ್ಯಾಂದ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಮತ್ತಿತರ ಗಣ್ಯರು ಭಾಗವಹಿಸುವರು. ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾವೇಶ್ವರ ದೇವಸ್ಥಾನದ ಕಾಯರ್ಾಧ್ಯಕ್ಷ ರಘು ಎಲ್. ಶೆಟ್ಟಿ ಆಯ್ಕೆಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೆಲು, ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ, ಕಲ್ಲಡ್ಕ ಪ್ರಖಂಡ ಅಧ್ಯಕ್ಷ ಸಚಿನ್ ಮೆಲ್ಕಾರ್, ಜಿಲ್ಲಾ ಸಂಪರ್ಕ ಪ್ರಮುಖ್ ಪದ್ಮನಾಭ ಕಟ್ಟೆ ವಿಟ್ಲ ಇದ್ದರು.


Leave a Comment