ಬಂಟ್ವಾಳ :ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಇಲ್ಲಿನ ಭವಿಷ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಸೆ 5ರಂದು ಮಂಗಳವಾರ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಈ ಸಂದರ್ಭದಲ್ಲಿ ಮಾತನಾಡಿ, ಶಿಕ್ಷಕ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕೇವಲ ಕೊಠಡಿಗಳಲ್ಲಿ ಪಾಠ ಮಾಡಿ ಪರೀಕ್ಷೆ ಮಾಡುವವರು ಶಿಕ್ಷಕರಲ್ಲ, ಒಂದು ಅಕ್ಷರ ಅಥವಾ ಅನುಭವ ಕಲಿಸಿಕೊಟ್ಟವರೂ ಸಹ
ಗುರುಗಳೇ. ಬೇರೆ ಯಾವ ವೃತ್ತಿಯಲ್ಲಿಯೂ ಸಿಗದ ತೃಪ್ತಿ ಶಿಕ್ಷಕ ವೃತ್ತಿಯಲ್ಲಿದೆ ಎಂಬುದಾಗಿ ಅವರು ಹೇಳಿದರು.
ಪದವಿ ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ವಿದ್ಯಾರ್ಥಿನಿ ಕು. ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.















