ಬಂಟ್ವಾಳ : ನವೋದಯ ಮಿತ್ರ ಕಲಾವೃಂದ (ರಿ), ನೇತ್ರಾವತಿ ಮಾತೃಮಂಡಲಿ ಹಾಗೂ ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಆಶ್ರಯದಲ್ಲಿ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೋಗದೊಂದಿಗೆ ಹಡೀಲು ಬಿದ್ದ ಗದ್ದೆಯಲ್ಲಿ ಸಾಮೂಹಿಕ ನೇಜಿ ನೆಡುವ ಕಾರ್ಯಕ್ರಮ ಭಾನುವಾರ ಬೆಳಗ್ಗೆ ನಡೆಯಿತು.
ಸತತವಾಗಿ 3ನೇ ವರ್ಷದ ಹಸಿರುಕ್ರಾಂತಿ ಭತ್ತದ ಕೃಷಿ ಯಲ್ಲಿ ಸಂಘದ ಸದಸ್ಯರು ಹಾಗೂ ಮಾತೃ ಮಂಡಳಿಯ ಸದಸ್ಯರು ಹಾಗೂ ಊರಿನ ಹಿರಿಯರು, ಕಿರಿಯರು ಸೇರಿ
ಸುಮಾರು 70 ಕ್ಕಿಂತಲೂ ಅಧಿಕ ಜನರು ಭಾಗಿಯಾಗಿದ್ದರು.ಮುಂದೆ ಈ ಕೃಷಿಯಲ್ಲಿ ಉತ್ಪತ್ತಿಯಾದ ಭತ್ತವನ್ನು ಪೊಳಲಿಯ ರಾಮಕೃಷ್ಣ ತಪೋವನಕ್ಕೆ ನೀಡಲಾಗುವುದು ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.















