ಫರಂಗಿಪೇಟೆ: ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಣಾ ಕಾರ್ಯಕ್ರಮ. ಸೇವಾಂಜಲಿ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಎ. ರುಕ್ಮಯ ಪೂಜಾರಿ.

Coastal Bulletin
ಫರಂಗಿಪೇಟೆ: ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಣಾ ಕಾರ್ಯಕ್ರಮ. ಸೇವಾಂಜಲಿ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಎ. ರುಕ್ಮಯ ಪೂಜಾರಿ.

ಬಂಟ್ವಾಳ: ಔಷಧಿಯ ಜೊತೆ ಉತ್ತಮ‌ ಪೌಷ್ಠಿಕ ಆಹಾರವನ್ನು ಸೇವಿಸಿದಾಗ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ಹೇಳಿದರು. ಕ್ಷಯ ಮುಕ್ತ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೋಮವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಿಸಿ ಮಾತನಾಡಿದರು. ಪೌಷ್ಠಿಕ ಆಹಾರ ರೋಗ ಗುಣವಾಗಲು ನೆರವಾದರೆ ಮನೆಯವರ ಭಾವನಾತ್ಮಕ ಬೆಂಬಲವೂ ರೋಗಿಗೆ ಅಗತ್ಯವಿದೆ. ಆ ನಿಟ್ಟಿನಲ್ಲಿ ಸೇವಾಂಜಲಿ ಪ್ರತಿಷ್ಠಾನ ಮಾಡುತ್ತಿರುವ ಈ ಕಾರ್ಯ ಅರ್ಥಪೂರ್ಣವಾದುದು. ಕೃಷ್ಣ ಕುಮಾರ್ ಪೂಂಜ ಅವರ ಸೇವೆಯೇ ಇಲ್ಲಿ ಮಾತನಾಡುತ್ತಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮರ್ಪಕವಾಗಿ ಕೆಲಸ ಮಾಡಿದಾಗ ಜನರಿಗೆ ಯಾಒಜನೆಗಳ ಪ್ರಯೋಜನ ಸಿಗುತ್ತದೆ. ಸೇವಾಂಜಲಿ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು. ಕ್ಷಯ ಗುಣಪಡಿಸಲು ಸಾಧ್ಯವಿರುವಂತಹ ರೋಗವಾಗಿದ್ದು ಔಷಧಿಯ ಜೊತೆ ಪೌಷ್ಠಿಕ ಆಹಾರದ ಸೇವನೆಯೂ ಅಗತ್ಯವಾಗಿದೆ ಎಂದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಮೇರಮಜಲು ಗ್ರಾ.ಪಂ‌.

ಮಾಜಿ ಅಧ್ಯಕ್ಷೆ ವೃಂದ ಪೂಜಾರಿ, ಉದ್ಯಮಿ ದೇವದಾಸ್ ಶೆಟ್ಟಿ ತುಪ್ಪೆಕಲ್ಲು, ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಉಪಸ್ಥಿತರಿದ್ದರು.

ಪ್ರಮುಖರಾದ ನಾರಾಯಣ ಬಡ್ಡೂರು, ಸುರೇಶ್ ರೈ ಪೆಲಪಾಡಿ, ಕೃಷ್ಣ ತುಪ್ಪೆಕಲ್ಲು, ಉಮಾ ಚಂದ್ರಶೇಖರ್,ಪದ್ಮನಾಭ ಕಿದೆಬೆಟ್ಟು, ವಿಕ್ರಂ ಬರ್ಕೆ, ಪ್ರಶಾಂತ್ ತುಂಬೆ,ಸುಕೇಶ್ ಶೆಟ್ಟಿ ತೇವು,ದಿನೇಶ್ ತುಂಬೆ, ನಾಗಪ್ಪ ಶೆಟ್ಟಿ ಮೇರಮಜಲು, ಕೇಶವ ದೋಟ, ಪ್ರಕಾಶ್ ಕಿದೆಬೆಟ್ಟು ಆರ್ ಎಸ್. ಜಯ ರಾಮಲ್ ಕಟ್ಟೆ, ಮಧುರಾಜ್ ಹಾಜರಿದ್ದರು. ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment