ಬಂಟ್ವಾಳ:ಇಲ್ಲಿನ ಸಾಲೆತ್ತೂರು ಗ್ರಾಮದ ಮಲಾರು ನಿವಾಸಿ, ಸುಂದರ ಸಪಲ್ಯ ( 94) ಇವರು ಅಸೌಖ್ಯದಿಂದ ಸೋಮವಾರ ಮುಂಜಾನೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಬಿಜೆಪಿ ಮುಖಂಡ ಮಾಧವ ಎಸ್.ಮಾವೆ ಸಹಿತ ಮೂವರು ಪುತ್ರರು ಮತ್ತು ಐವರು ಪುತ್ರಿಯರು ಇದ್ದಾರೆ. ಕೃಷಿ ಜೊತೆಗೆ ಭಜನೆ ಮತ್ತು ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಪಾಲ್ತಾಜೆ ಗೌರಿಕೋಡಿ ಎಂಬಲ್ಲಿ ಸೋಮವಾರ ಸಂಜೆ ನೆರವೇರಿತು.
ಬಂಟ್ವಾಳ ತಾಲೂಕು ಗಾಣಿಗರ
ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಮತ್ತಿತರ ಗಣ್ಯರು ಅಂತಿಮ ನಮನ ಸಲ್ಲಿಸಿದರು.















