ಪುತ್ತೂರು: ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

Coastal Bulletin
ಪುತ್ತೂರು: ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

ಮಂಗಳೂರು: ಲವ್‌-ಸೆಕ್ಸ್‌ ದೋಖಾ ಪ್ರಕರಣದಲ್ಲಿ ಪುತ್ತೂರು ಬಿಜೆಪಿ ಮುಖಂಡನ ಪುತ್ರನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆ ಪೊಲೀಸರು (Dakshina Kannada Women Police) ಬಂಧಿಸಿದ್ದಾರೆ.

ಪುತ್ತೂರು (Puttur) ಬಿಜೆಪಿ ಘಟಕದ ಪ್ರಭಾವಿ ಮುಖಂಡನ (BJP Leader) ಮಗ ಕೃಷ್ಣ ಜೆ.ರಾವ್ (21) ಬಂಧಿತ ಆರೋಪಿ. ಮೈಸೂರಿನ ಟಿ. ನರಸೀಪುರದಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 

ಏನಿದು ಪ್ರಕರಣ?

ಆರೋಪಿ ಕೃಷ್ಣ ಜೆ.ರಾವ್ ಪುತ್ತೂರಿನ ಹೈಸ್ಕೂಲ್‌ವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹುಡುಗಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಅದೇ ಪ್ರೀತಿ ಹಾಗೆಯೇ ಮುಂದುವರಿದಿತ್ತು. ಬಳಿಕ 2024ರ ಅ.11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನ ಕರೆದುಕೊಂಡು ಹೋಗಿದ್ದ. ಈ ವೇಳೆ ಮದುವೆಯಾಗುತ್ತೇನೆ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಅದಾದ ಬಳಿಕ 2025ರ ಜನವರಿಂದಲೂ ಬಲವಂತವಾಗಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ. ಕೆಲವು ಸಮಯದ ನಂತರ ಯುವತಿ ಗರ್ಭಿಣಿಯಾದ ವಿಚಾರ

ಬೆಳಕಿಗೆ ಬಂದಿತ್ತು. ಆದ್ರೆ ಕೃಷ್ಣ ಮದುವೆಯಾಗಲು ನಿರಾಕರಿಸಿದ್ದ.

ಇದಾದ ಬಳಿಕ ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆದಿತ್ತು. ಸಂಧಾನ ನಡೆದಿದ್ದ ಹಿನ್ನೆಲೆ ಆರೋಪಿ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗಿರಲಿಲ್ಲ. ಯುವಕನಿಗೆ 21 ವರ್ಷ ತುಂಬದ ಹಿನ್ನಲೆ ಮದುವೆಗೆ ಅಡ್ಡಿಪಡಿಸಲಾಗಿತ್ತು. ಆದ್ರೆ ಕಳೆದ ಜೂನ್‌ 23ಕ್ಕೆ 21 ವರ್ಷ ತುಂಬಿತ್ತು. ಆದಾಗ್ಯೂ ಮದುವೆಗೆ ಯುವಕ ಹಿಂದೇಟು ಹಾಕಿದ್ದ. ಹೀಗಾಗಿ ಮಂಗಳೂರಿನ ಖಾಸಗಿ ಕಾಲೇಜಿನ ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರು ದಾಖಲಿಸುತ್ತಿದ್ದಂತೆ ಆರೋಪಿ ಎಸ್ಕೇಪ್‌ ಆಗಿದ್ದ. ಆದ್ರೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಸದ್ಯ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಆರೋಪಿಯನ್ನ ಬಂಧಿಸಿ, ಮೆಡಿಕಲ್ ಟೆಸ್ಟ್ ಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.

Leave a Comment