ಫರಂಗಿಪೇಟೆ: ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಣೆ. ಸೇವಾಂಜಲಿಯ ಕಾರ್ಯ ಇತರ ಸಂಘಟನೆಗಳಿಗೆ ಪ್ರೇರಣ: ಡಾ. ಅಶೋಕ್ ರೈ.

Coastal Bulletin
ಫರಂಗಿಪೇಟೆ: ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಣೆ. ಸೇವಾಂಜಲಿಯ ಕಾರ್ಯ ಇತರ ಸಂಘಟನೆಗಳಿಗೆ ಪ್ರೇರಣ: ಡಾ. ಅಶೋಕ್ ರೈ.

ಬಂಟ್ವಾಳ : ತಾಲೂಕನ 18 ಗ್ರಾಮಗಳು ಕ್ಷಯ ಮುಕ್ತ ಗ್ರಾಮಗಳಾಗಿದ್ದು 30 ಗ್ರಾಮಗಳನ್ನು ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ತಿಳಿಸಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ರೋಗಿಗಳಿಗೆ ಔಷಧಿಯ ಜೊತೆ ಪೌಷ್ಟಿಕಾಹಾರ ಅತ್ಯಂತ ಅಗತ್ಯವಾಗಿದ್ದು ಅದನ್ನು 34 ತಿಂಗಳುಗಳಿಂದ ನೀಡುತ್ತಿರುವುದು ಸೇವಾಂಜಲಿ ಪ್ರತಿಷ್ಠಾನದ ದೊಡ್ಡ ಕಾರ್ಯ . ಇದು ಇನ್ನಿತರ ಸಂಘ ಸಂಸ್ಥೆಗಳಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತನ್ಯ ಕೆ.ಎಸ್ ಮಾತನಾಡಿ ಪೌಷ್ಟಿಕಾಹಾರ ಸೇವನೆ ಮಾಡಿದಾಗ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ರೋಗ ಗುಣಮುಖವಾಗಲು ಸಾಧ್ಯವಿದೆ. ಇಲ್ಲಿ ನೀಡುವ ಪೌಷ್ಟಿಕಾಹಾರವನ್ನು

ಮನೆಮಂದಿಗೆ ಅಥವಾ ಬೇರೆಯವರಿಗೆ ನೀಡದೆ ತಾವೇ ಸೇವಿಸಿ ಜೊತೆಗೆ ಸರಿಯಾದ ಔಷಧಿ ಸೇವನೆ ಮಾಡಿದಾಗ ಕ್ಷಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂದರು. ಆರೋಗ್ಯ ಇಲಾಖೆಯ ಡೇವಿಡ್ ಕ್ಷಯ ರೋಗದ ಬಗ್ಗೆ ಆರೋಗ್ಯ ಮಾಹಿತಿ ನೀಡಿದರು. ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಂಶೋಧನಾ ವಿದ್ಯಾರ್ಥಿ ಡಾ. ಮಹಮ್ಮದ್ ಬಿಲಾಲ್ ಪಾಷ, ಸೇವಾಂಜಲಿಯ ಮಾಧವ ಪೂಜಾರಿ ದೋಟ ಪ್ರಸಾದ್ ಕೇಸನಮೊಗರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿದರು, ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ನಾರಾಯಣ ಬಡ್ಡೂರು, ಪದ್ಮನಾಭ ಕಿದೆಬೆಟ್ಟು, ಕೇಶವ ದೋಟ ಪ್ರಶಾಂತ್ ತುಂಬೆ, ಮಧುರಾಜ್ ಶೆಟ್ಟಿ ಸುಜೀರು ಉಪಸ್ಥಿತರಿದ್ದರು.

Leave a Comment